ಶಿವಮೊಗ್ಗ: ಬಸ್ಸೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೆಲವರು ಗಾಯಗೊಂಡ ಘಟನೆ ವರದಿಯಾಗಿದೆ. ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿಯಲ್ಲಿ ಈ ಘಟನೆ ನಡೆದಿದೆ.
ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ದುರ್ಗಾಂಬ ಬಸ್ಸಿಗೆ ಲಾರಿ ಡಿಕ್ಕಿ ಆಗಿದೆ. ಹೊಸ ನಗರದಿಂದ ಬರುತ್ತಿದ್ದ ಭತ್ತ ಕಟಾವು ಯಂತ್ರವನ್ನು ಕೊಂಡೊಯ್ಯುತ್ತಿದ್ದ ತಮಿಳುನಾಡಿನ ಲಾರಿ ಇದಾಗಿದೆ. ಲಾರಿ ಡಿಕ್ಕಿಯಾದುದರಿಂದ ಬಸ್ಸು ಪಲ್ಟಿಯಾಗಿದೆ. ಬಸ್ಸಿನಲ್ಲಿ ೨೦ ಪ್ರಯಾಣಿಕರಿದ್ದು, ೧೫ ಜನರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ರಿಪ್ಪನ್‌ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.