ಮಂಡ್ಯ: ದೇವಸ್ಥಾನಕ್ಕೆ ಹೋಗಿದ್ದ ವೇಳೆ ದೇವಸ್ಥಾನದ ಗೇಟು ಮುರಿದು ಬಿದ್ದು ಐದು ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ದಾರುಣ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಹುಂಜನಕೆರೆಯಲ್ಲಿ ನಡೆದಿದೆ. ಮನೆಯವರೊಂದಿಗೆ ದೇವಸ್ಥಾನಕ್ಕೆ ತೆರಳಿದ್ದ ಐದು ವರ್ಷದ ಮಗು ಹೆಚ್.ಎಸ್. ಜಿಷ್ಣುವಿನ ತಲೆ ಮೇಲೆ ಗೇಟು ಬಿದ್ದಿದೆ. ಗೇಟು ಮುರಿದು ಬಿದ್ದು ಬಾಲಕ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ. ಗ್ರಾಮದ ಚೆನ್ನಕೇಶವ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.