ಇದೀಗ ಬಂದ ಸುದ್ದಿ
Sat. Dec 21st, 2024

ರೀಲ್ಸ್ ಮಾಡಲೆಂದು ವೀಡಿಯೋ ಶೂಟಿಂಗ್ ಮಾಡುತ್ತಿದ್ದ ವೇಳೆ ಸೋಶಿಯಲ್‌ ಮೀಡಿಯಾ ಇನ್ಫ್ಲುಯೆನ್ಸರ್‌ ಅನ್ವಿ ಕಾಮ್ದಾರ್‌ 300 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಇತ್ತೀಚೆಗೆ ನಡೆದಿತ್ತು. ಇದೀಗ ಮತ್ತೊಂದು ಇಂತಹುದೇ ಘಟನೆ ನಡೆದಿದೆ. ರೀಲ್ಸ್‌ ಮಾಡುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಯುವಕನೊಬ್ಬ 150 ಅಡಿ ಆಳದ ಜಲಪಾತದಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ರಾಜಸ್ಥಾನದ ಬಿಲ್ವಾರ ಜಿಲ್ಲೆಯ ಭವಾನಿ ನಗರದ ನಿವಾಸಿ ಕನ್ಹಯ್ಯಾಲಾಲ್‌ ಬೈರ್ವಾ (26) ಅಲ್ಲಿನ ಮೆನಾಲ್‌ ಜಲಪಾತಕ್ಕೆ ಬಂದಿದ್ದ. ತನ್ನ ಐದಾರು ಗೆಳೆಯರೊಂದಿಗೆ ರಭಸವಾಗಿ ಹರಿಯುತ್ತಿದ್ದ ನೀರಿನ ಮಧ್ಯೆ ರೀಲ್ಸ್‌ ಮಾಡಲು ಮುಂದಾಗಿದ್ದಾನೆ. ಜಲಪಾತದ ನಡುವೆ ಪ್ರವಾಸಿಗರ ಸುರಕ್ಷತೆಗಾಗಿ ಸರಪಳಿಯನ್ನು ಹಾಕಲಾಗಿತ್ತು. ಈ ಸರಪಳಿಯ ಸಹಾಯದಿಂದ ಸ್ನೇಹಿತರ ಜೊತೆಗೆ ನೀರಿನ ಮಧ್ಯೆ ಹೋಗಿದ್ದಾನೆ. ಈ ವೇಳೆ ಕನ್ಹಯ್ಯಾಲಾಲ್‌ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಜಲಪಾತದಿಂದ 150 ಅಡಿ ಆಳಕ್ಕೆ ಬಿದ್ದಿದ್ದಾನೆ. ಈ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ವಿಡಿಯೋ ಈಗ ವೈರಲ್‌ ಆಗಿದೆ. ಯುವಕನ ಶವ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ.

ವಿಡಿಯೋ ನೋಡಲು ಲಿಂಕ್ ಕ್ಲಿಕ್ ಮಾಡಿ..

https://x.com/priyarajputlive/status/1820498831399952402?ref_src=twsrc%5Etfw%7Ctwcamp%5Etweetembed%7Ctwterm%5E1820498831399952402%7Ctwgr%5E07d4309f63d5ebbe49b0a471f08e02ea1083bfec%7Ctwcon%5Es1_&ref_url=https%3A%2F%2Ftv9kannada.com%2Ftrending%2Fyouth-slips-150-feet-from-menal-waterfall-while-trying-to-making-reels-aks-879164.html

Related Post

Leave a Reply

Your email address will not be published. Required fields are marked *