ಲಕ್ನೋ: ಕ್ರಿಕೆಟ್ ಆಡುವಾಗ 10 ವರ್ಷದ ಬಾಲಕನಿಗೆ 11 ವರ್ಷದ ಬಾಲಕ ಹೊಡೆದ ಏಟಿಗೆ 10 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಉತ್ತರಪ್ರದೇಶದ ಕಾನ್ಪುರದ ಕೆಡಿಎಯ ಏಕ್ತಾ ಪಾರ್ಕ್ ಪ್ರದೇಶದ ಜಜ್ಮೌನಲ್ಲಿ ಈ ಘಟನೆ ನಡೆದಿದೆ. ಆದರೆ ಈ ಬಗ್ಗೆ ಸಾವನ್ನಪ್ಪಿದ ಮಗುವಿನ ತಾಯಿ ಬಳಿ ಪ್ರಕರಣ ದಾಖಲಿಸುವಂತೆ ಹೇಳಿದರೂ, ಕೇಸು ದಾಖಲಿಸಲು ನಿರಾಕರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೆಡಿಎಯ ಏಕ್ತಾ ಪಾರ್ಕ್ನಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದಾಗ, 11 ವರ್ಷದ ಬಾಲಕ ಬ್ಯಾಟಿಂಗ್ ಮಾಡುತ್ತಿರುತ್ತಾನೆ. 10 ವರ್ಷದ ಬಾಲಕ ಬೌಲಿಂಗ್ ಮಾಡುತ್ತಿರುತ್ತಾನೆ. ಎಸೆದ ಬಾಲ್ಗೆ 11 ವರ್ಷದ ಬಾಲಕ ಔಟ್ ಆಗಿರುತ್ತಾನೆ. ಆದರೆ ಅದು ನೋ ಬಾಲ್, ನಾನು ಮತ್ತೆ ಬ್ಯಾಟಿಂಗ್ ಮಾಡುವುದಾಗಿ ಆತ ಹೇಳಿದ್ದಾನೆ. ನೋ ಬಾಲ್ ಸಂಬಂಧ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ತಾರಕಕ್ಕೇರಿ 11 ವರ್ಷದ ಬಾಲಕ ಬ್ಯಾಟ್ನಿಂದ ಹೊಡೆದಿದ್ದಾನೆ. ಪರಿಣಾಮ ಕಿರಿಯ ಬಾಲಕ ಪ್ರಜ್ಞೆ ತಪ್ಪಿ ನೆಲಕ್ಕೆ ಬಿದ್ದಿದ್ದಾನೆ. ಮಕ್ಕಳೆಲ್ಲ ಗಾಬರಿಗೊಂಡು ನೆಲಕ್ಕೆ ಬಿದ್ದ ಮಗುವನ್ನ ತಕ್ಷಣ ಅವರ ಅಮ್ಮನ ಬಳಿಗೆ ಎತ್ತಿಕೊಂಡು ಹೋಗಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ವೈದ್ಯರು ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲು ಮಾಡುವಂತೆ ಮಗುವಿನ ತಾಯಿಗೆ ಕುಟುಂಬಸ್ಥರು, ಪೊಲೀಸರು ಒತ್ತಾಯಿಸಿದ್ದಾರೆ. ಆದರೆ, ನಾವು ಸಣ್ಣವರಿದ್ದಾಗ ಇದೇ ರೀತಿ ಜಗಳ ಮಾಡಿರುತ್ತೇವೆ. ಯಾವುದೇ ಮಕ್ಕಳು ಬೇಕಂತಲೇ, ಸಾಯೋ ತರ ಹೊಡೆಯಲ್ಲ. ಉದ್ದೇಶಪೂರ್ವಕವಾಗಿ ಮಕ್ಕಳು ಕೊಲೆ ಮಾಡಲ್ಲ. ಕ್ರಿಕೆಟ್ನಲ್ಲಿ ಜಗಳ ಸಾಮಾನ್ಯ. ದೇವರು ನನ್ನ ಮಗನಿಗೆ ಇಷ್ಟೇ ದಿನ ಬದುಕಲು ಅವಕಾಶ ಕೊಟ್ಟಿದ್ದಾನೆ ಅನಿಸುತ್ತೆ. ನಾನು ಕೇಸ್ ಮಾಡಿದ್ರೆ ಆ ಬಾಲಕನ ಅಮ್ಮನೂ ನರಳಬೇಕಾಗುತ್ತದೆ ಎಂದು ಹೇಳಿ ಆರೋಪಿ ಸ್ಥಾನದ ಮಗುವಿನ ಬಗ್ಗೆ ಮೃತ ಬಾಲಕನ ತಾಯಿ ಮಾನವೀಯತೆ ಮೆರೆದಿದ್ದಾಳೆ. ಇನ್ನು ಮೃತಪಟ್ಟ ಮಗುವಿನ ತಾಯಿಯ ಗಂಡ 9 ವರ್ಷದ ಹಿಂದೆಯೇ ಸಾವನ್ನಪ್ಪಿದ್ದಾನೆ. ಮನೆಯವರು ಮತ್ತೊಂದು ಮದುವೆ ಆಗುವಂತೆ ಹೇಳಿದರೂ ಮದುವೆ ಆಗಿರಲಿಲ್ಲ. ಸದ್ಯ ಆ ತಾಯಿ ಒಂಟಿಯಾಗಿದ್ದಾಳೆ ಎಂದು ಹೇಳಲಾಗಿದೆ.