ಮಂಡ್ಯ: ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಆರಂಭವಾದ ಹನುಮ ಧ್ವಜ ಘರ್ಷಣೆ, ಇಂದು ಜಿಲ್ಲಾ ಕೇಂದ್ರದಲ್ಲಿ ತೀವ್ರತೆ ಪಡೆಯಿತು. ಕೆರಗೋಡು ಗ್ರಾಮದಿಂದ ಹೊರಟ ಪ್ರತಿಭಟನಕಾರರು ಮಂಡ್ಯ ನಗರ ಪ್ರವೇಶಿಸುತ್ತಿದ್ದಂತೆ ಉದ್ರಿಕ್ತರಾದರು. ಶಾಸಕರು ರವಿ ಗಣಿಗ ಹಾಗೂ ಕಾಂಗ್ರೆಸ್ ಸಂಬAಧಿತ ಬ್ಯಾನರ್‌ಗಳನ್ನು ಹರಿಯಲು ಯತ್ನಿಸಿದರು. ಈ ವೇಳೆ ಪ್ರತಿಭಟನಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು. ಲಾಠಿಚಾರ್ಜ್ನಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆರಗೋಡು ಗ್ರಾಮದಿಂದ ಪ್ರತಿಭಟನಾ ಪಾದಯಾತ್ರೆ ಬೆಳಗ್ಗೆ ಆರಂಭಿಸಿದಾಗ ಪ್ರತಿಕ್ರಿಯೆ ನೀರಸವಾಗಿತ್ತು. ಆದರೆ, ಮಂಡ್ಯ ಸಮೀಪಿಸುತ್ತಿದ್ದಂತೆ ಪ್ರತಿಭಟನಕಾರರ ಸಂಖ್ಯೆ ಹೆಚ್ಚಾಯಿತು. ಘಟನೆಗೆ ಕಾಂಗ್ರೆಸ್ ನಾಯಕರು ಕಾರಣ ಎಂಬ ಆರೋಪಗಳನ್ನು ನಂಬಿದ ಪ್ರತಿಭಟನಕಾರರು ಬ್ಯಾನರ್‌ಗಳನ್ನು ಹರಿದು ತಮ್ಮ ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವರುಗಳಾದ ಸಿ.ಟಿ. ರವಿ, ಜನಾರ್ಧನ ರೆಡ್ಡಿ ಹಲವು ಬಿಜೆಪಿ ಮುಖಂಡರು ಭಾಗಿಯಾಗಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ.