ಗುಬ್ಬಿ: ಧಾರಾಕಾರ ಮಳೆಯಿಂದಾಗಿ ಗುಬ್ಬಿ ಪಟ್ಟಣದ ಸರ್ಕಾರಿ ಆಸ್ಪತ್ರೆಯೊಳಗೆ ನೀರು ನುಗ್ಗಿದ್ದು, ರೋಗಿಗಳು ರಾತ್ರಿಯಿಡೀ ನೀರಿನಲ್ಲೇ ಕಳೆದ ಘಟನೆ ನಡೆದಿದೆ. ಭಾರಿ ಮಳೆಯಿಂದಾಗಿ ಉಕ್ಕಿ ಹರಿದ ನೀರು ಆಸ್ಪತ್ರೆಯ ವಾರ್ಡ್‌ಗಳಿಗೆ ನುಗ್ಗಿದೆ. ಸುಮಾರು ಎರಡು ಅಡಿಗೂ ಹೆಚ್ಚು ನೀರು ನಿಂತಿದ್ದರಿಂದ ರೋಗಿಗಳು ರಾತ್ರಿ ನಿದ್ದೆ ಮಾಡಲಾಗದೆ ಪರದಾಡುವಂತಾಯಿತು.
ಸರ್ಕಾರಿ ಆಸ್ಪತ್ರೆಯ ಆಡಳಿತದ ವೈಫ್ಯಲ್ಯವೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ದೂರಿದ್ದಾರೆ.