ಇದೀಗ ಬಂದ ಸುದ್ದಿ
Sat. Dec 21st, 2024

ರಾಂಚಿ: ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಒಕ್ಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಮೀಸಲಾತಿಗೆ ಇರುವ ಶೇ 50ರ ಮಿತಿಯನ್ನು ತೆಗೆಯಲಾಗುತ್ತದೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು. ದೇಶಾದ್ಯಂತ ಜಾತಿ ಗಣತಿ ನಡೆಸಲಾಗುತ್ತದೆ ಎಂದೂ ಅವರು ಹೇಳಿದರು. ರ್ಯಾಲಿಯೊಂದರಲ್ಲಿ ಅವರು ಮಾತನಾಡಿದರು.
ಜಾರ್ಖಂಡ್ ಮುಖ್ಯಮಂತ್ರಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾದ ಕಾರಣ ಬಿಜೆಪಿಯು ಜಾರ್ಖಂಡ್ ಸರ್ಕಾರವನ್ನು ಉರುಳಿಸಲು ಯತ್ನಿಸಿತು ಎಂದು ರಾಹುಲ್ ಗಾಂಧಿ ಆಪಾದಿಸಿದರು.
ದಲಿತರು, ಆದಿವಾಸಿಗಳು ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಕಂಪೆನಿಗಳು, ಆಸ್ಪತ್ರೆಗಳು, ಶಾಲೆ ಕಾಲೇಜುಗಳು ಮತ್ತು ನ್ಯಾಯಾಲಯಗಳಲ್ಲಿ ಈ ಸಮುದಾಯಗಳ ಭಾಗವಹಿಸುವಿಕೆ ಕಡಿಮೆಯಿದೆ. ಇದು ದೇಶದ ಮುಂದಿರುವ ದೊಡ್ಡ ಪ್ರಶ್ನೆ. ನಮ್ಮ ಮೊದಲ ಆದ್ಯತೆ ದೇಶದಲ್ಲಿ ಜಾತಿಗಣತಿ ನಡೆಸುವುದು ಎಂದು ಅವರು ಹೇಳಿದರು.

Related Post

Leave a Reply

Your email address will not be published. Required fields are marked *