ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗೆ ಪ್ರಧಾನಿ ಮೋದಿ ಭಾರತರತ್ನ ಪ್ರಶಸ್ತಿ ಘೋಷಿಸಿದ ಬೆನ್ನಲ್ಲೇ, ಇತರ ಜನಪ್ರಿಯ ಸಾಧಕರಿಗೂ ಪ್ರಶಸ್ತಿ ನೀಡಲು ಒತ್ತಾಯ ಕೇಳಿಬಂದಿದೆ. ಕರ್ನಾಟಕದ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗೆ ಮರಣೋತ್ತರವಾಗಿ ಭಾರತರತ್ನ ನೀಡಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಒತ್ತಾಯಿಸಿದ್ದಾರೆ.
ಲಕ್ಷಾಂತರ ಜನರಿಗೆ ಅನ್ನ ಶಿಕ್ಷಣ ನೀಡಿ ಆಸರೆಯಾಗಿದ್ದ ಮಹಾತ್ಮರು ಶ್ರೀಗಳು ಇಡೀ ದೇಶಕ್ಕೆ ಮಾದರಿಯಾದರು. ಅವರಿಗೆ ಹಿಂದೆಯೇ ಈ ಗೌರವ ಸಿಗಬೇಕಿತ್ತು ಎಂದು ಅವರು ಹೇಳಿದ್ದಾರೆ.
ಅವರಿಗೆ ಭಾರತರತ್ನ ನೀಡಬೇಕೆಂಬುದು ಆರೂವರೆ ಕೋಟಿ ಜನರ ಭಾವನೆ. ಈ ಬಗ್ಗೆ ಪ್ರಧಾನಿ ಮೋದಿ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.