ಚೆನ್ನೈ: ಜನಪ್ರಿಯ ತಮಿಳು ನಟ ವಿಜಯ್ ರಾಜಕೀ ಪ್ರವೇಶ ಖಚತವಾಗಿದ್ದು, ಪಕ್ಷದ ಹೆಸರನ್ನೂ ಘೋಷಿಸಿದ್ದಾರೆ. `ತಮಿಳ ವೆಟ್ರಿ ಕಳಗಂ’ ಎಂಬ ರಾಜಕೀಯ ಪಕ್ಷ ಘೋಷಿಸಿರುವ ವಿಜಯ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ ಎಂದಿದ್ದಾರೆ.
ತಮಿಳುನಾಡಿನಲ್ಲಿ ಚಿತ್ರ ನಟರು ರಾಜಕೀಯ ಪ್ರವೇಶಿಸಿ ಯಶಸ್ವಿಯಾಗಿರು ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ವಿಜಯ್ ಅವರ ರಾಜಕೀಯ ಪ್ರವೇಶವೂ ಕುತೂಹಲ ಸೃಷ್ಟಿಸಿದೆ.
ಪಕ್ಷವು 2026ರ ತಮಿಳುನಾಡುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಣಯ ಕೈಗೊಂಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ಯಾವುದೇ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ.