ಇದೀಗ ಬಂದ ಸುದ್ದಿ
Sat. Dec 21st, 2024

ವಾರಾಣಸಿ: ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜಿಸುವ ಹಕ್ಕು ಅರ್ಚಕರ ಕುಟುಂಬಕ್ಕಿದೆ ಎಂದು ವಾರಾಣಸಿ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ ಎಂದು ವಕೀಲ ಮದನ್ ಮೋಹನ್ ಯಾದವ್ ಹೇಳಿದ್ದಾರೆ. ಮಸೀದಿಯ ನೆಲಮಾಳಿಗೆಯಲ್ಲಿ ಹಿಂದೂ ದೇವರನ್ನು ಪೂಜಿಸುವ ಹಕ್ಕು ನೀಡಿ ಜಿಲ್ಲಾ ನ್ಯಾಯಾಧೀಶ ಎ.ಕೆ. ವಿಶ್ವೇಶ್ ಆದೇಶಿಸಿದ್ದಾರೆ.
ಪೂಜೆ ನೆರವೇರಿಸಲು ಕಾಶಿ ವಿಶ್ವನಾಥ ಟ್ರಸ್ಟ್ ವತಿಯಿಂದ ಜಿಲ್ಲಾಡಳಿತ ವ್ಯವಸ್ಥೆ ಮಾಡಲಿದೆ ಎಂದು ಮೋಹನ್ ಯಾದವ್ ತಿಳಿಸಿದ್ದಾರೆ.
1993ರ ವರೆಗೆ ಅರ್ಚಕ ಸೋಮನಾಥ ವ್ಯಾಸ್ ಅವರು ಅಲ್ಲಿ ಪೂಜೆ ಸಲ್ಲಿಸುತ್ತಿದ್ದರು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಇದೀಗ ಎಎಸ್‍ಐ ವೈಜ್ಞಾನಿಕ ಸಮೀಕ್ಷೆ ವರದಿ ನೀಡಿದ ಬಳಿಕ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸೋಮನಾಥ ವ್ಯಾಸ್ ಮೊಮ್ಮಗ ಶೈಲೇಂದ್ರ ಕುಮಾರ್ ಪಾಠಕ್ ನ್ಯಾಯಾಲಯವನ್ನು ಕೋರಿದ್ದರು.

Related Post

Leave a Reply

Your email address will not be published. Required fields are marked *