Sunday, January 24 , 2021
ಸಾವಿಗೂ ಮುನ್ನ ಚಿರು ಹೇಳಿದ ಕೊನೆ ಮಾತು ನೆನೆದು ಭಾವುಕರಾದ ಪತ್ನಿ ಮೇಘನಾ ರಾಜ್

ಸಂದರ್ಶನವೊಂದರಲ್ಲಿ ಸ್ಯಾಂಡಲ್​​ವುಡ್ ನಟಿ ಮೇಘನಾ ರಾಜ್ ತಮ್ಮ ಪತಿ ಚಿರಂಜೀವಿ ಸರ್ಜಾ ಅವರ ಕೊನೆಯ ಮಾತುಗಳ ಬಗ್ಗೆ ನೆನಪಿಸಿಕೊಂಡರು.

ಜೂನ್ 7ರಂದು ಚಿರಂಜೀವಿ ತಮ್ಮ ಮನೆಯಲ್ಲಿ ಕುಸಿದು ಬಿದ್ದ ಘಟನೆಯನ್ನೂ ಮೆಲುಕು ಹಾಕಿದರು. ತೀವ್ರ ಹೃದಯಾಘಾತದಿಂದ ಬಳಲುತ್ತಿದ್ದ ಅವರು, ಜೂನ್ 7ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಆಗ ಮೇಘನಾ ರಾಜ್ ಐದು ತಿಂಗಳ ಗರ್ಭಿಣಿಯಾಗಿದ್ದರು.

ಮೇಘನಾಗೆ ಚಿರಂಜೀವಿ ಕೊನೆಯ ಮಾತುಗಳೇನು?
ಚಿರಂಜೀವಿ ಅವರು ತಮ್ಮ ಮನೆಯಲ್ಲಿ ಕುಸಿದು ಬಿದ್ದ ನಂತರ ಸ್ವಲ್ಪ ಮಟ್ಟಿಗೆ ಪ್ರಜ್ಞೆ ಕಳೆದುಕೊಂಡರು. ‘ಆತಂಕ ಪಡಬೇಡಿ’ ಎಂದು ಮೇಘನಾಗೆ ಕೊನೆಯ ಬಾರಿ ಚೀರು ಹೇಳಿದ್ದರು.

ಜೂನ್ 7ರಂದು ನಡೆದ ಘಟನೆಯನ್ನು ನೆನಪಿಸಿಕೊಂಡ ಮೇಘನಾ, ‘ಎಂದಿನಂತೆ ಭಾನುವಾರದಂತೆ ದಿನ ಆರಂಭವಾಯಿತು. ನಾನು ಮತ್ತು ಪ್ರೇರಣಾ (ಧ್ರುವ ಪತ್ನಿ) ಮನೆಯ ಹೊರಗೆ ಧ್ರುವ ನೊಡನೆ ಇದ್ದಾಗ ನಮ್ಮ ಮಾವ ಚಿರು ಕುಸಿದು ಬಿದ್ದರು ಎಂದು ನಮ್ಮ ಮಾವ ನಮಗೆ ಕರೆ ಮಾಡಿದ್ದರು. ನಾವು ಅವರನ್ನು ಎಂದೂ ಆ ರೀತಿ ನೋಡಿಯೇ ಇರಲಿಲ್ಲ. ಪ್ರಜ್ಞೆ ತಪ್ಪಿ ಸ್ವಲ್ಪ ಹೊತ್ತು ಆದ ಮೇಲೆ ಮತ್ತೆ ಜ್ಞಾನ ಬಂತು’ ಎಂದರು.

ಮೇಘನಾ ಮತ್ತಿತರರು ಆಂಬ್ಯುಲೆನ್ಸ್ ಗೆ ಕರೆ ಮಾಡಿ ಕಾರಿನಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ‘ನಾವು ಅಲ್ಲಿಗೆ ಹೋದಾಗ ವೈದ್ಯರು ತುರ್ತು ಚಿಕಿತ್ಸಾ ಕೊಠಡಿಗೆ ಕರೆದುಕೊಂಡು ಹೋಗಿ ನೋಡಿದಾಗ ಅದು ಹೃದಯ ಸ್ತಂಭನ ಎಂದು ವೈದ್ಯರು ಹೇಳಿದರು. ಇದೆಲ್ಲ ಬಹಳ ಬೇಗ ಆಯಿತು’ ಎಂದು ಭಾವುಕರಾದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]