
ಬೆಂಗಳೂರು (24.1.2021): ಶುಲ್ಕ ಪಾವತಿಸಿಲ್ಲವೆಂದು ಎಮಬ ಕಾರಣಕ್ಕಾಗಿ ಆನ್ ಲೈನ್ ತರಗತಿಗಳನ್ನು ಸ್ಥಗಿತಗೊಳಿಸಿದರೆ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು. ವಿದ್ಯಾರ್ಥಿಗಳಿಗೆ ಶುಲ್ಕ ಕಟ್ಟಿಲ್ಲವೆಂದು ಕಿರುಕುಳ ನೀಡುವುದು ಹಾಗೂ ಆನ್ ಲೈನ್ ತರಗತಿಗಳಿಗೆ ಪಾಸ್ವರ್ಡ್ ಕೊಡದೇ ಇರುವುದೇನಾದರು ತಿಳಿದು ಬಂದರೆ ಅಂತಹ ಶಾಲಾ- ಕಾಲೇಜುಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವುದು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
ಯಾವುದೇ ಶಾಲೆಗಳು ಈ ರೀತಿ ವಿದ್ಯಾರ್ಥಿಗಳಿಗೆ ತೊಂದರೆ ಕೊಟ್ಟಿರುವ ಬಗ್ಗೆ ದೂರು ಕೇಳಿಬಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.