Sunday, October 18 , 2020
ಸಂತ್ರಸ್ತರಿಗೆ ನಾವು ನೆರವು ನೀಡುತ್ತೇವೆ, ನಮಗೆ ನೀವು ನೆರವು ನೀಡಿ ಎಂದ ಅಪ್ಪು!

ಗಂಗಾವತಿ (18.10.2020) : ನೆರೆಹಾವಳಿ ಮತ್ತು ಪ್ರಕೃತಿ ವಿಕೋಪದಲ್ಲಿ ಸಿಲುಕಿರುವ ಸಂತ್ರಸ್ತರ ನೆರವಿಗೆ ನಾವಿದ್ದೇವೆ. ಆದರೆ, ಲಾಕ್​ಡೌನ್ ಬಳಿಕ ಕಂಗೆಟ್ಟಿರುವ ಚಂದನವನದ ನೆರವಿಗೆ ರಾಜ್ಯದ ಜನ ಬರಬೇಕು ಎಂದು ನಟ ಹಾಗೂ ನಿರ್ಮಾಪಕ ಪುನೀತ್​​ ರಾಜ್​ಕುಮಾರ್​​ ಮನವಿ ಮಾಡಿದ್ದಾರೆ.

ತಾಲೂಕಿನ ಮಲ್ಲಾಪುರದ ಬಳಿ ನಡೆಯುತ್ತಿರುವ ‘ಜೆಮ್ಸ್’ ಚಿತ್ರದ ಶೂಟಿಂಗ್​​ನಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ಈಗಾಗಲೇ ಸಿನಿಮಾ ರಂಗ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದೆ. ಲಾಕ್​ಡೌನ್​ ಬಳಿಕ ಈಗಷ್ಟೇ ಸಿನಿಮಾ ರಂಗದ ಚಟುವಟಿಕೆಗಳು ನಡೆಯುತ್ತಿವೆ. ಸುಧೀರ್ಘ 7 ತಿಂಗಳ ಕಾಲ ಎಲ್ಲವೂ ಬಂದ್​ ಆಗಿತ್ತು. ಕಲಾವಿದರನ್ನು ಪ್ರೋತ್ಸಾಹಿಸಲು ಸಿನಿಮಾ ಮಂದಿರಗಳಿಗೆ ಬಂದು ಸಿನಿಮಾ ನೋಡಿ ನಮ್ಮ ನೆರವಿಗೆ ನಿಲ್ಲಿ ಎಂದು ಮನವಿ ಮಾಡಿದರು.



ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಪುನೀತ್​ ರಾಜ್​ಕುಮಾರ್ ​ಉತ್ತರ ಕರ್ನಾಟಕದಲ್ಲಿನ ಪ್ರವಾಹ, ನೆರೆ ಸಂಕಷ್ಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಕೃತಿಯ ಮುಂದೆ ನಾವೆಲ್ಲ ಸಣ್ಣವರು. ನಿಸರ್ಗದ ನಿಯಮವನ್ನು ನಾವು ಪಾಲನೆ ಮಾಡಬೇಕು. ಸಂಕಷ್ಟದ ತೀವ್ರತೆ ಕಂಡು ಬಂದರೆ ನಾನು ವೈಯಕ್ತಿಕವಾಗಿ ಮತ್ತು ಇಡೀ ಚಿತ್ರ ತಂಡ, ಸಂತ್ರಸ್ತರ ನೆರವಿಗೆ ನಿಲ್ಲುತ್ತದೆ ಎಂದು ಭರವಸೆ ನೀಡಿದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]