Friday, January 15 , 2021
ತಂಡಕ್ಕೆ 11 ಮಂದಿ ಇಲ್ಲಾಂದ್ರೆ ನಾನೆ ಬರ್ತೇನೆ: ಭಾರತ ತಂಡಕ್ಕೆ ಸೆಹ್ವಾಗ್ ಆಫರ್
sehwag

ನವದೆಹಲಿ(12.1.2021): ಭಾರತ ತಂಡದಲ್ಲಿ ಗಾಯಾಳು ಸಂಖ್ಯೆ ಹೆಚ್ಚಾಗುತ್ತಿದ್ದಂತೆ ತಂಡದಲ್ಲಿ ಆಡುವ ಆಟಗಾರರು ಯಾರು ಎಂಬ ಗೊಂದಲ ಉಂಟಾಗುತ್ತಿದೆ.

ಈ ಮಧ್ಯೆ ತಂಡದ ಗಾಯಾಳು ಆಟಗಾರರ ಪಟ್ಟಿ ಟ್ವೀಟ್ ಮಾಡಿರುವ ಸಹ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಾವೆ ಭಾರತ ತಂಡಕ್ಕಾಗಿ ಆಡಲು ಸಿದ್ಧನಿದ್ದೇನೆ ಎಂದು ಟ್ವೀಟ್ ಮೂಲಕ ತಮಾಷೆ ಮಾಡಿದ್ದಾರೆ.

3ನೇ ಟೆಸ್ಟ್​ ಪಂದ್ಯದ ವೇಳೆ ರವೀಂದ್ರ ಜಡೇಜಾ, ಹನುಮ ವಿಹಾರಿ ಹಾಗೂ ರಿಷಭ್ ಪಂತ್​ ಕೂಡ ಗಾಯಕ್ಕೊಳಗಾಗಿದ್ದರು. ಒಟ್ಟಾರೆ 10ಕ್ಕೂ ಹೆಚ್ಚು ಅಟಗಾರರು ಟೂರ್ನಿಯಲ್ಲಿ ಗಾಯಗೊಂಡಿದ್ದಾರೆ. ಹೀಗಾಗಿ ಟೂರ್ನಿಯಲ್ಲಿ ಕೊನೆಯ ಪಂದ್ಯಕ್ಕೆ ತಂಡದಲ್ಲಿ ಉಳಿದಿರುವ ಎಲ್ಲಾ ಆಟಗಾರರನ್ನು ಸೇರಿಸಿ ಒಂದು ತಂಡ ಮಾಡುವಂತಾಗಿದೆ.

“ಎಲ್ಲಾ ಆಟಗಾರರು ಗಾಯಕ್ಕೆ ಒಳಗಾಗಿದ್ದಾರೆ. ತಂಡದಲ್ಲಿ 11 ಮಂದಿ ಇಲ್ಲದಿದ್ದರೆ ನಾನು ಆಸ್ಟ್ರೇಲಿಯಾಕ್ಕೆ ಹೋಗಲು ಸಿದ್ಧನಿದ್ದೇನೆ. ಕ್ವಾರಂಟೈನ್​ ನೋಡಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]