Friday, December 4 , 2020
ಕೊಹ್ಲಿಗಿಂತಲೂ ರಾಹುಲ್​ ಆಸೀಸ್​ಗೆ ದೊಡ್ಡ ತಲೆನೋವಾಗಿದ್ದಾರೆ: ಮ್ಯಾಕ್ಸ್​ವೆಲ್​
rahul

ಸಿಡ್ನಿ(21.11.2020): ಐಪಿಎಲ್​ನಲ್ಲಿ ರನ್​ಗಳ ಹೊಳೆಯನ್ನೇ ಹರಿಸಿರುವ ಕನ್ನಡಿಗ ರಾಹುಲ್​ ಆಸ್ಟ್ರೇಲಿಯಾ ವಿರುದ್ಧದ 3 ಮಾದರಿಯ ತಂಡದಲ್ಲೂ ಅವಕಾಶ ಪಡೆದಿದ್ದಾರೆ. ಪಂಜಾಬ್​ ತಂಡದಲ್ಲಿ ಸಹ ಆಟಗಾರನಾಗಿದ್ದ ಮ್ಯಾಕ್ಸ್​ವೆಲ್ ಪ್ರಕಾರ ಕೊಹ್ಲಿಗಿಂತಲೂ ರಾಹುಲ್ ಅಪಾಯಕಾರಿ ಬ್ಯಾಟ್ಸ್​ಮನ್​ ಎಂದಿದ್ದಾರೆ.

” ನಾನು ಪಂಜಾಬ್​ ತಂಡದಲ್ಲಿದ್ದರಿಂದ ರಾಹುಲ್​ರನ್ನು ಹೇಗೆ ಔಟ್​ ಮಾಡಬೇಕೆಂದು ನನ್ನನ್ನು ನಮ್ಮ ತಂಡದ ಆಟಗಾರರು ಕೇಳಿದರು. ನಾನು ಅದಕ್ಕೆ ಅವರನ್ನು ಓಡಿಸಿ.. ಓಡಿಸಿ.. ರನ್ಔಟ್ ಮಾಡಲು ಪ್ರಯತ್ನ ಮಾಡಬೇಕಷ್ಟೇ ಎಂದು ಹೇಳಿದ್ದೇನೆ” ಎಂದು ಮ್ಯಾಕ್ಸ್​ವೆಲ್ ಹೇಳಿದ್ದಾರೆ.

“ರಾಹುಲ್​ ಒಬ್ಬ ಗನ್​ ಬ್ಯಾಟ್ಸ್​ಮನ್, ಅವರು ಒತ್ತಡದ ಸನ್ನಿವೇಶಗಳನ್ನು ಸುಲಭವಾಗಿ ಎದುರಿಸಲಿದ್ದಾರೆ” ಎಂದು ಮ್ಯಾಕ್ಸ್​ವೆಲ್​ ಹೇಳಿದ್ದಾರೆ.

ಪಂಜಾಬ್ ತಂಡದ ನಾಯಕನಾಗಿದ್ದ ಕೆಎಲ್ ರಾಹುಲ್ ಈ ಬಾರಿ ಟೂರ್ನಿಯಲ್ಲಿ 14 ಪಂದ್ಯಗಳಿಂದ 1 ಶತಕ ಹಾಗೂ 5 ಅರ್ಧಶತಕದ ನೆರವಿನಿಂದ 670 ರನ್​ಗಳಿಸಿಆರೆಂಜ್ ಕ್ಯಾಪ್ ಪಡೆದಿದ್ದಾರೆ. ಅಲ್ಲದೆ ರೋಹಿತ್ ಅನುಪಸ್ಥಿತಿಯಲ್ಲಿ ಭಾರತ ತಂಡದ ಉಪನಾಯಕನಾಗಿ ನೇಮಕಗೊಂಡಿದ್ದಾರೆ.

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]