Sunday, September 19 , 2021
ರಾಜ್ಯ ಸರ್ಕಾರದಿಂದ 15 DYSPಗಳ ವರ್ಗಾವಣೆ

ಬೆಂಗಳೂರು (25.07.2021)  : ರಾಜ್ಯ ಸರ್ಕಾರದಿಂದ   15 ಡಿವೈಎಸ್ಪಿ(ಸಿವಿಲ್)ಗಳನ್ನು ವರ್ಗಾವಣೆ ಮಾಡಿ, ಸರ್ಕಾರ ಆದೇಶಿಸಿದೆ.   ಈ ಕುರಿತಂತೆ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರ ಪರವಾಗಿ ಆದೇಶ ಹೊರಡಿಸಿರುವ ಡಾ.ಎಂ.ಎ.ಸಲೀಂ, ಪೊಲೀಸ್ ಪ್ರಧಾನ ಕಚೇರಿಯಲ್ಲಿನ ಅಪರಾಧ ವಿಭಾಗದ ಡಿವೈಎಸ್ಪಿ(DYSP) ಆಗಿದ್ದಂತ ವಾಸುದೇವ್ ಕೆವಿ ಅವರನ್ನು ಚಿಕ್ಕಬಳ್ಳಾಪುರ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿದ್ದಾರೆ.

ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದಂತ ವಿಶ್ವನಾಥ ರಾವ್ ಕುಲಕರ್ಣಿ ಅವರನ್ನು ಬಳ್ಳಾರಿಯ ಹೊಸಪೇಟೆ ಉಪ ವಿಭಾಗದ ಡಿವೈಎಸ್ಪಿ ಆಗಿ ನೇಮಕ ಮಾಡಿದ್ದಾರೆ. ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿನ ಪಿ ಆರ್ ಸಿ ಆಗಿದ್ದಂತ ಅನಿಲ್ ಕುಮಾರ್ ಹೆಚ್ ಆರ್ ಅವರನ್ನು ಸಕಲೇಶಪುರ ಉಪ ವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದೆ.

ಮೈಸೂರಿನ ಕೆಪಿಎನಲ್ಲಿ ಡಿವೈಎಸ್ಪಿಯಾಗಿದ್ದಂತ ಜಿ ಎಸ್ ಗಜೇಂದ್ರ ಪ್ರಸಾದ್ ಅವರನ್ನು ಕೊಡಗು ಜಿಲ್ಲೆಯ ಮಡಿಕೇರಿ ಉಪ ವಿಭಾಗಕ್ಕೆ, ಕರ್ನಾಟಕ ಲೋಕಾಯುಕ್ತದಲ್ಲಿನ ಎಸ್ ಐಟಿಯ ಡಿವೈಎಸ್ಪಿಯಾಗಿದ್ದಂತ ಬಿ ಎಸ್ ಅಬ್ದುಲ್ ಖಾದರ್ ಅವರನ್ನು ಬೆಂಗಳೂರಿನ ಪುಲಕೇಶಿನಗರದ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.

ಸಿಐಡಿಗೆ ವರ್ಗಾವಣೆ ಆದೇಶದಲ್ಲಿದ್ದಂತ ಎಂ ಇ ಮನೋಜ್ ಕುಮಾರ್ ಅವರನ್ನು ಬೆಂಗಳೂರಿನ ಯಲಹಂಕ ಉಪ ವಿಭಾಗದ ಡಿವೈಎಸ್ಪಿಯಾಗಿ, ಬೆಂಗಳೂರು ನಗರದ ಸಿಸಿಆರ್ ಟಿ ವರ್ಗಾವಣೆ ಆದೇಶದಲ್ಲಿದ್ದಂತ ಎನ್ ಟಿ ಶ್ರೀನಿವಾಸರೆಡ್ಡಿಯವರನ್ನು ಬೆಂಗಳೂರಿನ ಅರಣ್ಯ ಘಟಕದ ಡಿವೈಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ.

ರಾಜ್ಯ ಗುಪ್ತ ವಾರ್ತೆಗೆ ವರ್ಗಾವಣೆ ಆದೇಶದಲ್ಲಿದ್ದಂತ ಮಲ್ಲೇಶಪ್ಪ ಮಲ್ಲಾಪೂರ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ  ಡಿವೈಎಸ್ಪಿಯಾಗಿ, ಬಾಗಲಕೋಟೆ ಜಿಲ್ಲೆಯ ಡಿಸಿಆರ್ ಟಿಯಲ್ಲಿ ಡಿವೈಎಸ್ಪಿಯಾಗಿದ್ದಂತ ರವೀಂದ್ರ ಎಸ್ ಶಿರೂರ ಅವರನ್ನು ಬೆಳಗಾವಿಯ ಡಿಸಿಆರ್ ಇಗೆ ವರ್ಗಾವಣೆ ಮಾಡಲಾಗಿದೆ.

ಬೆಂಗಳೂರಿನ ಯಲಹಂಕ ಉಪವಿಭಾಗದ ಡಿವೈಎಸ್ಪಿಯಾಗಿದ್ದಂತ ಜಯರಾಮ್ ಆರ್ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಉಪ ವಿಭಾಗದಲ್ಲಿನ ಡಿವೈಎಸ್ಪಿ ಕೆ.ರವಿಶಂಕರ್ ಅವರನ್ನು ಪೊಲೀಸ್ ಪ್ರಧಾನ ಕಚೇರಿಯ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಬಳ್ಳಾರಿಯ ಹೊಸಪೇಟೆ ಉಪ ವಿಭಾಗದ ಡಿವೈಎಸ್ಪಿ ವಿ ರಘು ಕುಮಾರ್ ಅವರನ್ನು ರಾಜ್ಯ ಗುಪ್ತವಾರ್ತೆಗೆ, ಸಕಲೇಶಪುರದ ಡಿವೈಎಸ್ಪಿ ಗೋಪಿ ಆರ್ ಅವರನ್ನು ಸಿಐಡಿ(CID)ಗೆ ವರ್ಗಾವಣೆ ಮಾಡಲಾಗಿದೆ. ಬೆಂಗಳೂರಿನ ಪುಲಕೇಶಿನಗರದ ಡಿವೈಎಸ್ಪಿ ತಬರಕ್ ಫಾತೀಮಾ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಿದೆ. ಬೆಂಗಳೂರಿನ ಅರಣ್ಯಘಟಕದ ಡಿವೈಎಸ್ಪಿ ಹೆಚ್ ಎಸ್ ರಾಮಲಿಂಗೇಗೌಡ ಅವರನ್ನು ಬೆಂಗಳೂರು ನಗರದ ಸಿಸಿಆರ್ ಟಿಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]