
ಬೆಂಗಳೂರು (04.12.2020): ಮರಾಠ ಪ್ರಾಧಿಕಾರ ರಚನೆ ವಿರೋಧಿಸಿ ಕನ್ನಡ ಪರ ಹೋರಾಟಗಾರರು ನಾಳೆ ಕರ್ನಾಟಕ ಬಂದ್ಗೆ ನಡೆಸಲಿದ್ದು, ಈ ಬಗ್ಗೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗೂ ಸಾ ರಾ ಗೋವಿಂದು ನೇತೃತ್ವದಲ್ಲಿ ನಾಳೆಯ ಬಂದ್ ಬಗ್ಗೆ ಇಂದು ರೋಡ್ ಶೋ ನಡೆಯಲಿದೆ.
ಬಂದ್ಗೆ ಪೊಲೀಸರಿಂದ ಈವರೆಗೆ ಬೆಂಬಲ ದೊರೆತಿಲ್ಲ. ಆದರೆ ಬಂದ್ಗೆ ಪೆಟ್ರೋಲ್-ಡೀಸೆಲ್ ಬಂಕ್ ಮಾಲೀಕರಿಂದ ನೈತಿಕ ಬೆಂಬಲ ದೊರಕಿದ್ದು, ನಾಳೆ ಎಂದಿನಂತೆ ಬಂಕ್ಗಳು ಕಾರ್ಯ ನಿರ್ವಹಿಸಲಿವೆ. ಕರ್ನಾಟಕ ಬಂದ್ಗೆ ಕರವೇ ನಾರಾಯಣ ಗೌಡ ಬಣ ಸೇರಿದಂತೆ 1,500 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಸೂಚಿಸಿವೆ.
ಕೆಎಸ್ಆರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ, ಆಸ್ಪತ್ರೆ, ಮೆಡಿಕಲ್ ಶಾಪ್, ಸರ್ಕಾರಿ ಕಚೇರಿ, ಆ್ಯಂಬುಲೆನ್ಸ್, ಹಾಲು, ಪೇಪರ್, ವಿಮಾನ, ರೈಲ್ವೆ ಸೇವೆ, ಬ್ಯಾಂಕ್, ಹೋಟೆಲ್, ಬಟ್ಟೆ ಅಂಗಡಿ, ಕೃಷಿ ಮಾರುಕಟ್ಟೆ, ತರಕಾರಿ, ಹೂ- ಹಣ್ಣು, ಪೆಟ್ರೋಲ್ ಬಂಕ್, ಬಾರ್ ಶಾಪ್ , ಮಾಲ್, ರೆಸ್ಟೋರೆಂಟ್, ಥಿಯೇಟರ್ ಓಪನ್ ಇರುತ್ತವೆ.
ಏರ್ ಪೋರ್ಟ್ ಟ್ಯಾಕ್ಸಿ, ಓಲಾ, ಊಬರ್, ಟ್ಯಾಕ್ಸಿ ಸಂಚಾರ, ಬೀದಿ ಬದಿ ವ್ಯಾಪಾರ, ಆಟೋ ಸೇವೆ ಲಭ್ಯವಿಲ್ಲ.