Sunday, September 19 , 2021
ಟೋಕಿಯೋ ಒಲಂಪಿಕ್ಸ್: ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿಗೆ ಬೆಳ್ಳಿ ಪದಕ

ಟೋಕಿಯೊ  (25.07.2021) :    ಮಹಿಳೆಯರ 49 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ  ಸ್ಪರ್ಧೆಯಲ್ಲಿ  ಮೀರಾಬಾಯಿ ಚಾನು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಒಲಿಂಪಿಕ್ ದಾಖಲೆಯೊಂದಿಗೆ ಚೀನಾದ ಹೌ ಜಿಹುಯಿ ಚಿನ್ನ ಗೆದ್ದರೆ, ಕಂಚಿನ ಪದಕ ಇಂಡೊನೇಷ್ಯಾದ ಐಸಹಾ ವಿಂಡಿ ಕಾಂಟಿಕಾ ಅವರ ಪಾಲಾಗಿದೆ.

26 ವರ್ಷದ ಮೀರಾಬಾಯಿ ಒಟ್ಟು 202 ಕೆಜಿ (87 ಕೆಜಿ ಸ್ನ್ಯಾಚ್‌ ಮತ್ತು 115 ಕೆಜಿ ಕ್ಲೀನ್‌ ಆಯಂಡ್‌ ಜರ್ಕ್‌) ಭಾರ ಎತ್ತಿದ್ದಾರೆ. 2000ನೇ ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚು ಗೆದ್ದ ನಂತರ ಭಾರತಕ್ಕೆ ಪದಕ ಸಿಗುತ್ತಿರುವುದು ಇದೇ ಮೊದಲು.

ಕಳೆದ ಬಾರಿ ರಿಯೊ ಡಿ ಜನೈರೊದಲ್ಲಿ ಮೀರಾಬಾಯಿ ನಿರಾಸೆ ಅನುಭವಿಸಿದ್ದರು. ಹೌ ಜಿಹುಯಿ ಒಟ್ಟು 210 ಕೆಜಿ (94 ಕೆಜಿ ಮತ್ತು 116 ಕೆಜಿ) ಭಾರ ಎತ್ತಿದರು. ಇಂಡೊನೇಷ್ಯಾ ವೇಟ್‌ಲಿಫ್ಟರ್ 194 ಕೆಜಿ (84 ಕೆಜಿ ಮತ್ತು 110 ಕೆಜಿ) ಸಾಧನೆ ಮಾಡಿದರು. ಸ್ನ್ಯಾಚ್‌ನ ಮೊದಲ ಪ್ರಯತ್ನದಲ್ಲಿ 84 ಕೆಜಿ ಎತ್ತಿದ ಮೀರಾಬಾಯಿ ನಂತರ ಅದನ್ನು 87 ಕೆಜಿ ಏರಿಸಿದರು. ಮೂರನೇ ಪ್ರಯತ್ನದಲ್ಲಿ ವೈಫಲ್ಯ ಕಂಡರು. 94 ಕೆಜಿ ಎತ್ತಿದ ಚೀನಾದ ಕ್ರೀಡಾಪಟು ಒಲಿಂಪಿಕ್ಸ್ ದಾಖಲೆ ಬರೆದರು. ಕ್ಲೀನ್ ಆಯಂಡ್ ಜರ್ಕ್‌ನಲ್ಲಿ ವಿಶ್ವ ದಾಖಲೆ ಹೊಂದಿರುವ ಮೀರಾಬಾಯಿ ಮೊದಲ ಎರಡು ಪ್ರಯತ್ನಗಳಲ್ಲಿ ಕ್ರಮವಾಗಿ 110 ಮತ್ತು 115 ಕೆಜಿ ಸಾಧನೆ ಮಾಡಿದರು. ಮೂರನೇ ಸುತ್ತಿನಲ್ಲಿ ವೈಫಲ್ಯ ಕಂಡರು. ಆದರೆ ಅಷ್ಟರಲ್ಲಿ ಬೆಳ್ಳಿ ಪದಕ ಖಚಿತಪಡಿಸಿಕೊಂಡಿದ್ದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]