Sunday, September 19 , 2021
ಇನ್ನೂ 8 ವರ್ಷ ಸಾವು-ನೋವುಗಳು ಇದ್ದೇ ಇರುತ್ತವೆ: ಕೋಡಿಶ್ರೀ

ಕೋಲಾರ(14.09.2021): ಕೊರೊನಾ ಎಂಬುದು ಜಗತ್ತಿನ 800 ಕೋಟಿ ಜನರನ್ನು ಅಲ್ಲಾಡಿಸಿದೆ. ಅದು ಇರುವುದು ಕೇವಲ 1 ಗ್ರಾಂ ಅಷ್ಟೇ. ಇನ್ನೂ 8 ವರ್ಷಗಳು ಸಾವು-ನೋವುಗಳು ಇದ್ದೇ ಇರುತ್ತವೆ ಎಂದು ಕೋಡಿ ಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದ್ದಾರೆ.

ಮನುಷ್ಯ ಸಂಪಾದನೆ ಮಾಡಿದ್ದನ್ನೆಲ್ಲಾ ಆಸ್ಪತ್ರೆಗಳಿಗೆ ಕಟ್ಟುತ್ತಿದ್ದಾನೆ. ಇದಕ್ಕೆಲ್ಲ ನಮ್ಮ ಜೀವನ ಶೈಲಿಯ ಬದಲಾವಣೆ ಕಾರಣ. ಪ್ರಕೃತಿ ಮುನಿಸಿಕೊಂಡಿದೆ. ಹಣ ಮದದಿಂದ ದೈವ ಭಕ್ತಿ, ತಂದೆ-ತಾಯಿ, ಗುರು-ಹಿರಿಯರು, ಮಾನವೀಯತೆಯನ್ನೂ ಮರೆಯುತ್ತಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ.

ಈ ಹಿಂದೆ ಶುಭ್ರವಾಗಿ ಪಾತ್ರೆ, ಮನೆ, ಅಡುಗೆ ಮನೆಯನ್ನು ಸಾರಿಸಿ ತೊಳೆಯುತ್ತಿದ್ದರು. ಕೈಕಾಲು ತೊಳೆದು ಊಟ ಮಾಡುತ್ತಿದ್ದರು. ಇಂದು ಚಪ್ಪಲಿ ಹಾಕಿಕೊಂಡೇ ಮನೆಯಲ್ಲಿ ಓಡಾಡುತ್ತಾರೆ, ಊಟ ಮಾಡುತ್ತಾರೆ. ಇದರ ಪರಿಣಾಮವಾಗಿ ಹಲವು ರೋಗಗಳನ್ನು ಎದುರಿಸುವಂತಾಗಿದೆ ಎಂದು ಕೋಡಿ ಶ್ರೀಗಳು ತಿಳಿಸಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]