
ನಾಗಪುರ(24.01.2021) : ರಾಷ್ಟ್ರೀಯ ಭದ್ರತೆಗೆ ಮಾಹಿತಿ ಭದ್ರತೆಯು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ತಿಳಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಅವರು, ಪ್ರಸ್ತುತ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತೆಗೆ ಮಾಹಿತಿ ಭದ್ರತೆಯು ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದು ನಮ್ಮ ಆರ್ಥಿಕತೆಗೆ ಬಲವಾದ ಆಘಾತವನ್ನು ನೀಡುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಭದ್ರತೆಯು ಸಶಸ್ತ್ರ ಭದ್ರತೆಗೆ ಮಾತ್ರ ಸೀಮಿತವಾಗಿಲ್ಲ. ಅದು ಇತರ ಆರು ಪ್ರಮುಖ ಅಡಿಪಾಯಗಳ ಮೇಲೆ ನಿಂತಿದೆ. ಸೈನ್ಯದ ಭದ್ರತೆ, ಆರ್ಥಿಕ ಭದ್ರತೆ, ಆರೋಗ್ಯ ಭದ್ರತೆ, ಆಹಾರ ಭದ್ರತೆ, ಇಂಧನ ಭದ್ರತೆ ಮತ್ತು ಪರಿಸರ ಭದ್ರತೆಗಳನ್ನು ಹೊಂದಲು ಇಡೀ ರಾಷ್ಟ್ರದ ಶ್ರಮ ಬೇಕು ಎಂದು ನರವಣೆ ಹೇಳಿದ್ದಾರೆ.