Friday, January 15 , 2021
ಅಂದು ಮಲೇರಿಯಾ ಮಾತ್ರೆ, ಇಂದು ಭಾರತದ ಕೊರೊನಾ ಲಸಿಕೆಗೆ ಎಲ್ಲಿಲ್ಲದ ಬೇಡಿಕೆ
covid 19

ಪುಣೆ(12-01-2021) : ಕೊರೊನಾ ವೈರಸ್ ಚಿಕಿತ್ಸೆಗೆಂದು ಕಳೆದ ವರ್ಷ ಮಲೇರಿಯಾಗೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಗಾಗಿ ಆಗ ಎಲ್ಲಿಲ್ಲದ ಬೇಡಿಕೆ ಭಾರತಕ್ಕೆ ಬಂದಿತ್ತು. ಅಮೆರಿಕ, ಬ್ರೆಜಿಲ್, ನೆರೆಯ ಸಾರ್ಕ್ ರಾಷ್ಟ್ರಗಳು ಸೇರಿ ಸುಮಾರು 30 ರಾಷ್ಟ್ರಗಳು ಈ ಔಷಧಿ ಕಳುಹಿಸುವಂತೆ ಭಾರತಕ್ಕೆ ಬೇಡಿಕೆ ಇರಿಸಿದ್ದವು ಮತ್ತು ದೇಶವು ರಫ್ತು ಸಹ ಮಾಡಿತ್ತು. ಈಗ ಲಸಿಕೆ ಕಳುಹಿಸಿಕೊಡುವಂತೆ ಸೆರಮ್ ಹಾಗೂ ಭಾರತದ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿವೆ.

ಕೊರೊನಾ ವೈರಸ್ ಸೋಲಿಸಲು ಅಗತ್ಯವಿರುವ ನೂರಾರು ಮಿಲಿಯನ್ ಲಸಿಕೆ ಡೋಸ್ಗಳನ್ನು ತಯಾರಿಸುವ ಸ್ಪರ್ಧೆಯಲ್ಲಿ ವಿಶ್ವದ ಜನರು ಭಾರತದತ್ತ ನೋಡುತ್ತಿದ್ದಾರೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ಸಿಇಒ ಆದರ್ ಪೂನಾವಾಲಾ ತಿಳಿಸಿದ್ದಾರೆ.

ಈ ಕ್ಷಣವನ್ನು ಐತಿಹಾಸಿಕ ಎಂದು ಕರೆದಿರುವ ಪೂನಾವಾಲಾ ಅವರು, ಅನೇಕ ದೇಶಗಳು ತಮ್ಮ ಪ್ರಜೆಗಳಿಗೆ ಭಾರತದಿಂದ ಲಸಿಕೆಗಳನ್ನು ಖರೀದಿಸಲು ಸೆರಮ್ ಇನ್ಸ್ಟಿಟ್ಯೂಟ್ ಮತ್ತು ಪ್ರಧಾನಮಂತ್ರಿಕಚೇರಿಗೆ ಪತ್ರ ಬರೆದಿರುವುದಾಗಿ ಹೇಳಿದರು.

ನಾವು ಸೌದಿ ಅರೇಬಿಯಾ, ಬ್ರೆಜಿಲ್, ಬಾಂಗ್ಲಾದೇಶ ಮತ್ತು ಆಫ್ರಿಕಾದಲ್ಲಿರುವ ಅನೇಕ ದೇಶಗಳೊಂದಿಗೆ ಒಪ್ಪಂದಮಾಡಿಕೊಂಡಿದ್ದೇವೆ. ನಾವು ದೊಡ್ಡ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದ್ದೇವೆ. ಪ್ರಪಂಚದಾದ್ಯಂತ ಸಣ್ಣ ಕಂಪನಿಗಳು ಇನ್ನೂ ಅಗತ್ಯವಿರುವಷ್ಟು ಪ್ರಮಾಣದ ಡೋಸ್ಗಳನ್ನು ಉತ್ಪಾದಿಸಲು ಸಾಧ್ಯವಿಲ್ಲದಿರುವುದರಿಂದ ದೇಶಗಳು ಭಾರತದತ್ತ ನೋಡುತ್ತಿವೆ ಎಂದು ತಿಳಿಸಿದ್ದಾರೆ.

ಭಾರತ ಇದುವರೆಗೆ ರಫ್ತಿನ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಿಲ್ಲ. ಆದರೆ ಬ್ರೆಜಿಲ್ನಿಂದ ಎರಡು ದಶಲಕ್ಷ ಡೋಸ್ ಕೋವಿಶೀಲ್ಡ್ ಬೇಡಿಕೆಯನ್ನು ಕೇಳಿರುವ ಹೊರತಾಗಿಯೂ ಯಾವುದೇ ಕ್ಲಿಯರೆನ್ಸ್ ಘೋಷಿಸಿಲ್ಲ.

ಪೂನಾವಾಲಾ ಅವರು, ಭಾರತ ಸರ್ಕಾರಕ್ಕೆ ತಮ್ಮ ಮೊದಲ ಆದ್ಯತೆ ನೀಡುವುದಾಗಿ ಅಭಯ ನೀಡಿದರು. ಕೇಂದ್ರವು 11 ಮಿಲಿಯನ್ ಕೋವಿಶೀಲ್ಡ್ ಡೋಸ್ಗಳಿಗೆ ಆರ್ಡರ್ ಮಾಡಿದೆ. ಎಸ್ಐಐ ನ್ಯಾಯಸಮ್ಮತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಉತ್ಸುಕವಾಗಿದೆ. 2021ರಲ್ಲಿ ಲಸಿಕೆಯನ್ನು ದೇಶದ ಪ್ರತಿಯೊಬ್ಬರಿಗೂ ತರುವುದೇ ಸವಾಲಿನ ಕೆಲಸ ಎಂದು ಹೇಳಿದರು.

ನಾವು ಸಾಮಾನ್ಯ ಜನರಿಗೆ ಬೆಂಬಲ ನೀಡಲು ಬಯಸುತ್ತೇವೆ. ದುರ್ಬಲರು, ಬಡವರು ಮತ್ತು ಹೆಲ್ತ್ ಕೇರ್ ಕೆಲಸಗಾರರಿಗೆ ಮೊದಲ 100 ದಶಲಕ್ಷ ಡೋಸ್ಗಳಿಗೆ ₹ 200 ವಿಶೇಷ ಬೆಲೆಯನ್ನು ಸರ್ಕಾರ ಕೋರಿಕೆಯ ಮೇರೆಗೆ ನೀಡಿದ್ದೇವೆ. ನಾವು ಆರಂಭದಲ್ಲಿ ಲಾಭ ಮಾಡಿಕೊಳ್ಳಲ್ಲ ಎಂಬ ನಿರ್ಧಾರ ಮಾಡಿದ್ದೇವೆ. ಆ ನಂತರ ನಾವು ಇನ್ನೂ ನ್ಯಾಯಯುತ ಬೆಲೆಯನ್ನು ಕಾಯ್ದುಕೊಳ್ಳುತ್ತೇವೆ. ಅದು ₹ 200ಕ್ಕಿಂತ ಸ್ವಲ್ಪ ಹೆಚ್ಚು, ಇದು ನಮ್ಮ ವೆಚ್ಚದರವಾಗಿದೆ ಎಂದು ಪೊನಾವಾ ಹೇಳಿದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]