
ಬೆಂಗಳೂರು(2/10/2021): ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ದರೆ ಎಲ್ಲವನ್ನೂ ಬರೆದುಕೊಡ್ತಿದ್ದೆ ಎಂದು ಸ್ಯಾಂಡಲ್ವುಡ್ನ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.
ರೈತರ ಹೋರಾಟದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವರಾಜ್ಕುಮಾರ್, ರೈತರ ಹೋರಾಟ ನೋಡಿದ್ರೆ ಹೊಟ್ಟೆ ಉರಿಯುತ್ತೆ. ಪಾಪ ಅನ್ಸುತ್ತೆ ಎಂದರು. ರೈತರ ಹೋರಾಟದ ಬಗ್ಗೆ ನಾವ್ಯಾರು ಕಮೆಂಟ್ ಮಾಡ್ತಿಲ್ಲ ಅಂತಾರೆ. ಆದ್ರೆ ಅದು ನಮ್ಮಿಂದ, ಇಂಡಸ್ಟ್ರಿಯಿಂದ ಅಥವಾ ಇಡೀ ಭಾರತೀಯ ಸಿನಿಮಾರಂಗ ಬೀದಿಗೆ ಇಳಿಯೋದ್ರಿಂದ ಸಮಸ್ಯೆ ಬಗೆಹರಿಯಲ್ಲ. ಹಾಗೆ ಆಗೋದಾದ್ರೆ ನಾವು ಬೀದಿಗಿಳಿಯಲೂ ಸಿದ್ಧ ಎಂದಿದ್ದಾರೆ.
ರೈತರ ಸಮಸ್ಯೆಯನ್ನ ಸರ್ಕಾರವೇ ಬಗೆಹರಿಸಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಬೇಕು. ನಮ್ಮ ಸಮಸ್ಯೆಗಳನ್ನ ನಾವು ಪರಿಹಾರ ಮಾಡಿಕೊಳ್ಳೋಕೆ ಆಗುತ್ತಿಲ್ಲ, ಅಂತಹದ್ದರಲ್ಲಿ ನಮ್ಮ ಕೈಯಲ್ಲಿ ಏನಿದೆ?’ ರೈತರು ಏನೇ ಮಾಡಿದ್ರು ನಮ್ಮ ಸಪೋರ್ಟ್ ಖಂಡಿತ ಇದೆ. ನನ್ನ ಕೈಯಲ್ಲಿ ಅಧಿಕಾರ ಇದ್ದಿದ್ರೆ, ಎಲ್ಲವನ್ನೂ ಬರೆದು ಕೊಡ್ತಿದ್ದೆ ಎಂದರು.