
ಚಾಮರಾಜನಗರ (13.01.2021) : ವಿಶ್ವನಾಥ್ ಅವರಿಗೆ ಗ್ರಾಮದೇವತೆಯ ಶಾಪ ಇದೆ. ಅದಕ್ಕೆ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ ಎಂದು ಸಾ ರಾ ಮಹೇಶ್ ಟಾಂಗ್ ನೀಡಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಹೆಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಕುರಿತು ಮಾತನಾಡಿದ ಅವರು, ಗ್ರಾಮ ದೇವತೆಯ ಶಾಪ, ನ್ಯಾಯ ದೇವತೆಯ ತೀರ್ಪು ಇರುವುದರಿಂದ ಸಿಎಂ ಯಡಿಯೂರಪ್ಪ ಏನು ಮಾಡಲು ಸಾಧ್ಯ? ಕಾನೂನಿಗಿಂತ ಅವರು ದೊಡ್ಡವರೇನಲ್ಲ. ಹೀಗಾಗಿ ಮಂತ್ರಿ ಸ್ಥಾನ ಕೈತಪ್ಪಿದೆ ಎಂದಿದ್ದಾರೆ.
ಮುಂಬೈಗೆ ಹೋಗಿ ಅವರ ಹುಣಸೂರಿನ ಮತದಾರರನ್ನು ಮಾರಾಟ ಮಾಡಿದ್ದಾರೆ. ಈಗ ಯಡಿಯೂರಪ್ಪನವರ ಮೇಲೆ ಗುಬೆ ಕೂರಿಸುವ ಪ್ರಯತ್ನ ನಡೆಸಿದ್ದಾರೆ. ಉಪ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಯಡಿಯೂರಪ್ಪ ಹೇಳಿರಲಿಲ್ಲವೆ? ಈಗ ಮಾಡಿದ್ದುಣ್ಣೋ ಮಹಾರಾಯ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.