Wednesday, June 23 , 2021
ರೋಹಿಣಿ ಸಿಂಧೂರಿ ಆಡಿಯೋ ವೈರಲ್​: ವರ್ಗಾವಣೆಗೆ ಇದೇ ಕಾರಣವಂತೆ?

ಮೈಸೂರು (10.06.2021): ಭೂ ಹಗರಣದಿಂದಲೇ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಕಾರಣ ಎಂದು ಇದುವರೆಗೂ ಹೇಳಲಾಗುತ್ತಿತ್ತು. ಆದರೆ ಇದೀಗ ಇದಕ್ಕೆ ಸಾಕ್ಷಿ ಎಂಬಂತೆ ರೋಹಿಣಿ ಸಿಂಧೂರಿಯವರ ಆಡಿಯೋ ವೈರಲ್​ ಆಗಿದೆ.

ಭೂ ಮಾಫಿಯಾ ವಿರುದ್ಧ ಹೋರಾಡಿದ್ದಕ್ಕೆ ನನಗೆ ವರ್ಗಾವಣೆ ಭಾಗ್ಯ ಸಿಕ್ಕಿದೆ. ಶಾಸಕ ಸಾ.ರಾ. ಮಹೇಶ್​ ಹಾಗೂ ಮುಡಾ ಅಧ್ಯಕ್ಷ ಹೆಚ್​.ವಿ. ರಾಜೀವ್​ ಷಡ್ಯಂತ್ರದಿಂದ ನನ್ನನ್ನ ವರ್ಗಾವಣೆ ಮಾಡಲಾಗಿದೆ ಎಂದು ಮಾತನಾಡಿದ್ದಾರೆ.

ಅಧಿಕಾರಿಗಳಿಗೆ ಬೆದರಿಸಿ, ಆಮಿಷ ತೋರಿಸಿ ಭೂ ಮಾಫಿಯಾ ಮಾಡುತ್ತಿದ್ದಾರೆ. ಲಿಂಗಾಬುದಿ ಕೆರೆ ಬಳಿ ಭೂಮಿ ಒತ್ತುವರಿ ಮಾಡಿ ನಿರ್ಮಾಣವಾಗುತ್ತಿರುವ ರೆಸಾರ್ಟ್​ನಲ್ಲಿ ಇವರಿಬ್ಬರೂ ಪಾಲುದಾರರಿದ್ದಾರೆ ಎಂದು ವೈರಲ್​ ಆಗಿರುವ ಆಡಿಯೋದಲ್ಲಿ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

ಇವರಿಗೆಲ್ಲ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ..?ಸಾ.ರಾ. ಮಹೇಶ್​ ನನ್ನ ಬಳಿ ದಾಖಲೆ ಕೇಳಿದ್ದರು. ನಾನು ನೀಡಿದ್ದೇನೆ. ಬೇರೆ ಯಾರಾದ್ರೂ ಕೇಳಿದ್ರೂ ಅವರಿಗೂ ದಾಖಲೆ ಕೊಡುತ್ತೇನೆ. ನಾನು ಭೂ ಅಕ್ರಮದ ವಿರುದ್ಧ ತನಿಖೆಗೆ ಮುಂದಾಗಿದ್ದೆ. ಆದರೆ ಸಾರಾ ಮಹೇಶ್​​ ಹಾಗೂ ರಾಜೀವ್​ ಷಡ್ಯಂತ್ರ ಮಾಡಿ ನನ್ನ ವರ್ಗಾವಣೆ ಮಾಡಿಸಿದ್ರು ಎಂದಿದ್ದಾರೆ.

ಇದನ್ನೂ ಓದಿ
ನನ್ನ ಮೇಲಿನ ಆರೋಪ ಸುಳ್ಳಾದಲ್ಲಿ ರೋಹಿಣಿಯನ್ನು ಅಮಾನತು ಮಾಡಬೇಕು: ಸಾರಾ ಸವಾಲ್

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]