
ಬೆಂಗಳೂರು (29-12-2020): ರಾಜ್ಯದ ಸಾರ್ವಜನಿಕ ಉದ್ಯಮಗಳಲ್ಲಿ ಅನುಕಂಪದ ಆಧಾರದ ನೇಮಕಾತಿ ಮಾಡಿಕೊಳ್ಳುವಂತೆ ಸಾರ್ವಜನಿಕ ಉದ್ಯಮಗಳ ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿ ಬಿಎಚ್ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ನಾಗರಿಕ ಸೇವಾ ನಿಯಮ 1996 ಅಡಿ ಎಲ್ಲ ಸಾರ್ವಜನಿಕ ಉದ್ದಿಮೆಗಳು ನಿಯಮದ ಮೂಲ ಉದ್ದೇಶಗಳಿಗೆ ಧಕ್ಕೆ ಆಗದಂತೆ ಹಾಗೂ ತಮಗೆ ಅವಶ್ಯ ಇರುವ ಬದಲಾವಣೆಯೊಂದಿಗೆ ಮೃತ ಉದ್ಯೋಗಿಯ ಅರ್ಹ ಕುಟುಂಬ ಸದಸ್ಯರನ್ನು ನೇಮಕ ಮಾಡಿಕೊಳ್ಳುವಂತೆ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಲಾಭದಲ್ಲಿ ಇರುವ ಉದ್ಯಮಗಳಿಗೆ ಈ ಆದೇಶ ಕಡ್ಡಾಯವಾಗಿ ಅನ್ವಯಿಸುತ್ತದೆ. ಉಳಿದಂತೆ ನಷ್ಟದಲ್ಲಿ ಇರುವ ಉದ್ಯಮಿಗಳ ಆಡಳಿ ಮಂಡಳಿಯ ವಿವೇಚನೆಗೆ ಬಿಟ್ಟಿರುತ್ತದೆ. ಈಗಾಗಲೇ ಅನುಕಂಪದ ಆಧಾರ ಮೇಲೆ ಬಂದ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥಗೊಳಿಸಬೇಕು. ಮೃತ ನೌಕರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವಂತಿಲ್ಲ ಎಂದು ಆದೇಶಿಸಿದೆ.