Wednesday, June 23 , 2021
ಖಾಸಗಿ ಶಾಲಾ ಶುಲ್ಕ ನಿಯಂತ್ರಣ ಹೋರಾಟ: ಮೂಡುಕೋಣಾಜೆ ಜೊತೆ ನೀವೂ ಕೈ ಜೋಡಿಸಿ

ಬೆಂಗಳೂರು (08.05.2021) : ಇಡೀ ದೇಶವೇ ಕೊರೊನಾ ಎಂಬ ಜಾಗತಿಕ ಮಹಾಮಾರಿಯಿಂದ ನಲುಗುತ್ತಿರುವ ಸಮಯದಲ್ಲಿಯೂ ಮತ್ತು ಖಾಸಗಿ ಶಾಲೆಗಳ ಶುಲ್ಕಗಳ ವಿಚಾರದಲ್ಲಿ ಕೇಂದ್ರ ಶಿಕ್ಷಣ ಸಚಿವರ ನೇರ ಹಸ್ತಕ್ಷೇಪದ ನಂತರವೂ ಭಾರತದಾದ್ಯಂತದ ಖಾಸಗಿ ಶಾಲೆಗಳು ಅಮಾನವೀಯವಾಗಿ ಪೋಷಕರಿಂದ ಭಾರೀ ಶುಲ್ಕ ವಸೂಲಿ ಮಾಡುವುದನ್ನು ಮುಂದುವರೆಸುತ್ತಿವೆ ಈ ಹಿನ್ನೆಲೆ ಮಿತೇಶ್ ಕುಮಾರ್ ಮೂಡುಕೋಣಾಜೆ ಹೋರಾಟಕ್ಕೆ ಮುಂದಾಗಿದ್ದಾರೆ.

ಈ ಸಂಬಂಧ ಮಾತನಾಡಿರುವ ಅವರು, ಮಹಾಮಾರಿಯಿಂದ ಹಲವಾರು ಜನರು ಉದ್ಯೋಗ ಕಳೆದುಕೊಂಡು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿರುವ ಈ ಸಂಕಷ್ಟದ ಹೊತ್ತಿನಲ್ಲಿ ಮಕ್ಕಳ ಶಾಲಾ ಫೀಸ್ ಅನ್ನು ಪೂರ್ಣ ಪ್ರಮಾಣದಲ್ಲಿ ಕಟ್ಟುವಂತೆ, ಇಲ್ಲವಾದಲ್ಲಿ ಮಕ್ಕಳ ಪರೀಕ್ಷಾ ಫಲಿತಾಂಶಕ್ಕೆ ತಡೆಯೊಡ್ಡುವ ಮಾನಸಿಕ ಒತ್ತಡವನ್ನು ಪೋಷಕರ ಮೇಲೆ ಹೇರಲಾಗುತ್ತಿದೆ ಎಂದಿದ್ದಾರೆ.

ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಪೋಷಕರು ಆರ್ಥಿಕ ದುಸ್ಥಿತಿಯಿಂದಾಗಿ ಅಂತತ್ರ ಸ್ಥಿತಿಯಲ್ಲಿದ್ದಾರೆ. ಖಾಸಗಿ ಶಾಲೆಗಳ ಶಾಲಾ ಶುಲ್ಕ ವಸೂಲಾತಿ ಮಾಫಿಯಾವನ್ನು ತಡೆಗಟ್ಟುವುದು ಈ ಹೊತ್ತಿನ ಆದ್ಯತೆಯಾಗಿದೆ. ಈ ಹಿನ್ನೆಲೆ ಈ ಶಿಕ್ಷಣ ಮಾಫಿಯಾ ವಿರುದ್ಧ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

AIPA (ಅಖಿಲ ಭಾರತ ಪೋಷಕರ ಸಂಘವು) ಅನುದಾನರಹಿತ ಖಾಸಗಿ ಶಾಲೆ (ಶುಲ್ಕ ಸಂಗ್ರಹ ನಿಯಂತ್ರಣ) ಮಸೂದೆ 2021 ಅನ್ನು ತಯಾರಿಸಿದೆ ಮತ್ತು NPUSPTA( ರಾಷ್ಟ್ರೀಯ ಪದವಿ ಪೂರ್ವ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಸಂಘ) ದೊಂದಿಗೆ ಈ ಕರಡು ಮಸೂದೆಯನ್ನು ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಚರ್ಚೆಗೆ ಮಂಡಿಸಬೇಕೆಂದು ಮತ್ತು ಸಾಧ್ಯವಾದಷ್ಟು ಬೇಗ ಭಾರತದಲ್ಲಿ ಖಾಸಗಿ ಶಾಲಾ ಶುಲ್ಕವನ್ನು ನಿಯಂತ್ರಿಸಲು ರಾಷ್ಟ್ರವ್ಯಾಪಿ ಏಕ ಶುಲ್ಕ ನೀತಿ ಯನ್ನು ಜಾರಿಗೆ ತರಬೇಕೆಂದು ನಾವು ಒತ್ತಾಯಿಸಿದ್ದಾರೆ.ಈ ಸಂಬಂಧ ನೀವೂ ಕೂಡ ಈ ಹೋರಾಟದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳ ಜೀವನಕ್ಕೆ ಸುಗಮ ಹಾದಿ ನಿರ್ಮಾಣ ಮಾಡಬಹುದಾಗಿದೆ. ಅದಕ್ಕೆ ನೀವು ಮಾಡಬೇಕಿರುವು ಇಷ್ಟೇ ,,,

#RegulatePrivateSchoolFeesIndia ಅನುಷ್ಠಾನಕ್ಕೆ ಪ್ರಧಾನಿ ಮತ್ತು ಕೇಂದ್ರ ಶಿಕ್ಷಣ ಸಚಿವರನ್ನು ಒತ್ತಾಯಿಸಲು  ಈ ಅರ್ಜಿಗೆ ಸಹಿ ಮಾಡಿ.

ಇದು ಭಾರತದ ಪ್ರತಿಯೊಂದು ಮನೆ ಮತ್ತು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರುವ ವಿಷಯವಾಗಿರುವುದರಿಂದ ಈ ಲಿಂಕ್​ ಕ್ಲಿಕ್​ ಮಾಡಿ ಈ ಹೋರಾಟದಲ್ಲಿ ನೀವೂ ಭಾಗಿಯಾಗಿ  https://www.change.org/RegulatePrivateSchoolFeesInIndia

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]