
ಬೆಂಗಳೂರು (16.01.2021) : ಯಲಹಂಕ ವಲಯದ 10 ಕಿ. ಮೀ. ವ್ಯಾಪ್ತಿಯಲ್ಲಿ ಮಾಂಸ ಮಾರಾಟದ ಉದ್ದಿಮೆಗಳನ್ನು ಮುಚ್ಚುವುದು ಸೇರಿದಂತೆ ಹೋಟೆಲ್ ಮತ್ತು ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ಎ.ಎಸ್.ಎಫ್ ನಲ್ಲಿ ದಿನಾಂಕ: 03.02.2021 ರಿಂದ 07.02.2021 ರವರೆಗೆ ಅಂತಾರಾಷ್ಟ್ರೀಯ ಮಟ್ಟದ ಏರ್ಶೋ-2021 ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಯಲಹಂಕ ಏರ್ ಪೋರ್ಸ್ ಸ್ಟೇಷನ್ ಸುತ್ತಮುತ್ತಲಿನ 10 ಕಿ.ಮೀ ಪ್ರದೇಶದ ವ್ಯಾಪ್ತಿಯಲ್ಲಿ ದಿನಾಂಕ: 17.01.2021 ರಿಂದ 09.02.2021 ರವರೆಗೆ ಮಾಂಸ ಮಾರಾಟದ ನಿಷೇದ ಹೇರಲಾಗಿದೆ.
ಇದನ್ನು ಉಲ್ಲಂಘಿಸಿದಲ್ಲಿ ಕೆ.ಎಂ.ಸಿ ಕಾಯ್ದೆ 1976 ರ ಸೆಕ್ಷನ್ 2(22) ಹಾಗೂ ಸೆಕ್ಷನ್ 353(5) ರಂತೆ ಮತ್ತು ಭಾರತೀಯ ಎರ್ಕ್ರಾಫ್ಟ್ ರೂಲ್ಸ್ 1937ರ ರೂಲ್ 91 ರೀತ್ಯಾ ಕ್ರಮ ವಹಿಸಲಾಗುವುದೆಂದು ವಲಯದ ಜಂಟಿ ಆಯುಕ್ತರು ಮಾಹಿತಿ ನೀಡಿದ್ದಾರೆ.