Friday, December 4 , 2020
ಪ್ರಧಾನಿ ಬ್ಯಾಂಕ್​ ಬ್ಯಾಲೆನ್ಸ್​​​ನಲ್ಲಿ ಏರಿಕೆ: ಮೋದಿ ಬಳಿ 2.85 ಕೋಟಿ ರೂ. ಮೌಲ್ಯದ ಆಸ್ತಿ!

ನವದೆಹಲಿ (16-10-2020): ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟ ಸಹೋದ್ಯೋಗಿಗಳ ಜತೆ ತಮ್ಮ ಆಸ್ತಿ ಮತ್ತು ಸಾಲದ ಮೊತ್ತ ಘೋಷಿಸಿದರು.



ಪಿಎಂ ಮೋದಿಯವರ ಸಂಪತ್ತು 2020ರ ಜೂನ್ 30ರ ವೇಳೆಗೆ ಸುಮಾರು 2.85 ಕೋಟಿ ರೂ. ಮೌಲ್ಯವಾಗಿದ್ದು, 2019ರಲ್ಲಿ ಘೋಷಿಸಿದ 2.49 ಕೋಟಿ ಮೌಲ್ಯದ ಆಸ್ತಿಗಿಂತ ಅಲ್ಪ ಏರಿಕೆಯಾಗಿದೆ. ಆಸ್ತಿ ಮೌಲ್ಯ ಏರಿಕೆಯು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ ಮತ್ತು ಮೌಲ್ಯದ ಸೇರ್ಪಡೆಯಿಂದಾಗಿ ಬ್ಯಾಂಕ್ ಸ್ಥಿರ ಠೇವಣಿ ಹೆಚ್ಚಾಗಿದೆ.

ಪಿಎಂ ಮೋದಿಗೆ ಶೂನ್ಯ ಸಾಲ70 ವರ್ಷದ ಪ್ರಧಾನ ಮಂತ್ರಿ ಶೂನ್ಯ ಸಾಲ ಹೊಂದಿದ್ದಾರೆ. ಜೂನ್ ಅಂತ್ಯದ ವೇಳೆಗೆ ಪ್ರಧಾನಿ ಮೋದಿ, 31,450 ರೂ. ನಗದು ಹೊಂದಿದ್ದರು. ಉಳಿತಾಯ ಖಾತೆ ಬಾಕಿ ಜೂನ್ 30ರಂದು 3.38 ಲಕ್ಷವಾಗಿದ್ದು, 2019ರ ಮಾರ್ಚ್ 31ರಂದು 4,143 ರೂ.ಯಷ್ಟಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗಾಂಧಿನಗರ ಶಾಖೆಯಲ್ಲಿ ಅವರ ಎಫ್‌ಡಿಯಲ್ಲಿ 2020ರ ಜೂನ್ 30ರ ವೇಳೆಗೆ 1,27,81,574 ರೂಯಿಂದ 1,60,28,039 ರೂ.ಗೆ ಏರಿದೆ.

ಪ್ರಧಾನಿ ಮೋದಿ 1,51,875 ರೂ. ಮೌಲ್ಯದ ಸುಮಾರು 45 ಗ್ರಾಂ. ನಾಲ್ಕು ಚಿನ್ನದ ಉಂಗುರ ಹೊಂದಿದ್ದಾರೆ. ಯಾವುದೇ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಿಲ್ಲ. 1.1 ಕೋಟಿ ರೂ. ಮೌಲ್ಯದ ಗಾಂಧಿನಗರದಲ್ಲಿ ಒಂದು ಜಮೀನು ಮತ್ತು ಮನೆ ಇದೆ. ತಮ್ಮ ಕುಟುಂಬಸ್ಥರೊಂದಿಗೆ ಇದರ ಭಾಗ ಮಾಲೀಕರಾಗಿದ್ದಾರೆ. ಈ ಸ್ಥಿರ ಆಸ್ತಿಯು ಪಿಎಂ ಮತ್ತು ಇತರ ಮೂವರು ಜಂಟಿ ಮಾಲೀಕತ್ವವಿದೆ.

ಪ್ರಧಾನಿ ತಮ್ಮ ಸಂಪತ್ತಿನ ಘೋಷಣೆಯಲ್ಲಿ ಯಾವುದೇ ಕಾರು ಇಲ್ಲ ಎಂದಿದ್ದಾರೆ. ಜೀವ ವಿಮೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಮತ್ತು ಮೂಲಸೌಕರ್ಯ ಬಾಂಡ್‌ಗಳು ಪಿಎಂ ಮೋದಿಯವರ ತೆರಿಗೆ ಉಳಿತಾಯ ಸಾಧನಗಳಾಗಿವೆ. ಪ್ರಧಾನಿ ಅವರು 8,43,124 ರೂ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮೂಲಕ ತೆರಿಗೆ ಉಳಿಸಿದ್ದು, ಜೀವ ವಿಮೆಗಾಗಿ 1,50,957 ರೂ. ಪ್ರೀಮಿಯಂ ಪಾವತಿಸಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]