Wednesday, June 23 , 2021
ಗಾಯದ ಮೇಲೆ ಬರೆ: ರಾಜ್ಯದಲ್ಲಿ100 ರ ಗಡಿ ದಾಟಿದ ಪೆಟ್ರೋಲ್

ಬೆಂಗಳೂರು (06-06-2021): ಕೊರೋನಾ ಕಾರಣದಿಂದ ಉದ್ಯೋಗವೂ ಇಲ್ಲದೇ ಗಳಿಕೆಯೂ ಇಲ್ಲದೇ ದಿನನಿತ್ಯದ ಜೀವನ ನಡೆಸಲು ಕಷ್ಟ ಪಡುತ್ತಿದ್ದ ಜನಸಾಮಾನ್ಯರಿಗೆ ಪೆಟ್ರೋಲ್ ಬೆಲೆ 100 ರ ಗಡಿ ದಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಶತಕದಂಚಿಗೆ ಬಂದು ಮತ್ತೆ ಇಳಿಕೆ ಕಂಡಿದ್ದ ಪೆಟ್ರೋಲ್ ದರ ರಾಜ್ಯದಲ್ಲಿ ಇಂದು ಶತಕದ ಗಡಿ ದಾಟಿದೆ. ಡೀಸೆಲ್ ದರ 90 ರ ಗಡಿ ದಾಟಿ ಶತಕದಂಚಿಗೆ ಬಂದು ನಿಂತಿದೆ. ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನತೆ ಈಗ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ದಿಕ್ಕು ಕಾಣದಂತಾಗಿದ್ದಾರೆ. ವರ್ಷದ ಹಿಂದೆ 90 ರೂ ಇದ್ದ ಅಡುಗೆ ಎಣ್ಣೆ ಬೆಲೆ 185 ರೂಪಾಯಿಗಳಿಗೆ ಬಂದು‌ ತಲುಪಿರುವ ಸಮಯದಲ್ಲೇ ಪೆಟ್ರೋಲ್ ಬೆಲೆ ದುಬಾರಿಯಾಗಿರುವುದು ಜನತೆಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಪೆಟ್ರೋಲ್ 100.22 ಆಗಿದ್ದರೆ ಡೀಸೆಲ್ 92.95 ರೂಪಾಯಿಗಳಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಪೆಟ್ರೋಲ್ 100.11 ರೂ ಮತ್ತು ಡೀಸೆಲ್ ಬೆಲೆ 92.91 ರೂಗಳಾಗಿದೆ. ಉಳಿದ ಜಿಲ್ಲೆಗಳಲ್ಲಿ ಭಾರಿ ವ್ಯತ್ಯಾಸವೇನೂ ಇಲ್ಲ. ಪೆಟ್ರೋಲ್ ಬೆಲೆ 99 ರ ಗಡಿ ದಾಟಿ 100 ರ ಸಮೀಪ ಬಂದು ನಿಂತಿದ್ದು, ಲೀಟರ್ ಪೆಟ್ರೋಲ್ ಗೆ 100 ರೂ ನೀಡಿದರೂ ಚಿಲ್ಲರೆ ನೀಡದಂತಾಗಿ ಬರೋಬ್ಬರಿ 100 ರೂಪಾಯಿಗಳನ್ನು ವ್ಯಯಿಸಬೇಕಾಗಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]