Sunday, September 19 , 2021
ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರ ಘೋಷಣೆ: ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್‌ ನಾಯಕ

ಕಾಬೂಲ್(08.09.2021): ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರವನ್ನು ಘೋಷಿಸಲಾಗಿದ್ದು, ಇದರ ಮುಖ್ಯಸ್ಥರನ್ನಾಗಿ ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ತಾಲಿಬಾನ್ ಘೋಷಿಸಿದೆ.

ತಾಲಿಬಾನ್ ಸಂಸ್ಥಾಪಕ ಮತ್ತು ದಿವಂಗತ ಸರ್ವೋಚ್ಚ ನಾಯಕ ಮುಲ್ಲಾ ಒಮರ್ ಅವರ ಪುತ್ರ ಮುಲ್ಲಾ ಯಾಕೂಬ್ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಿಸಲಾಗಿದೆ. ಹಕ್ಕಾನಿ ನೆಟ್ವರ್ಕ್ ನಾಯಕ ಸಿರಾಜುದ್ದೀನ್ ಹಕ್ಕಾನಿಗೆ ಆಂತರಿಕ ಸಚಿವ ಸ್ಥಾನ ನೀಡಲಾಗಿದೆ.

ಕ್ಯಾಬಿನೆಟ್ ಇನ್ನೂ ಪೂರ್ಣಗೊಂಡಿಲ್ಲ, ಇದು ಕೇವಲ ಕಾರ್ಯಾರಂಭ ಎಂದು ಮುಜಾಹಿದ್ ಕಾಬೂಲ್‌ನ ಸರ್ಕಾರಿ ಮಾಹಿತಿ ಮತ್ತು ಮಾಧ್ಯಮ ಕೇಂದ್ರದಲ್ಲಿ ತಿಳಿಸಿದ್ದಾರೆ. ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರಾದರ್ ಅವರನ್ನು ಉಪ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ ಎಂದು ತಾಲಿಬಾನ್ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮುಲ್ಲಾ ಮೊಹಮ್ಮದ್ ಹಸನ್-ಪ್ರಧಾನಿ

ಮೌಲ್ವಿ ಅಬ್ದುಲ್ ಸಲಾಮ್-ಉಪ ಪ್ರಧಾನಿ

ಮೌಲ್ವಿ ಮೊಹಮ್ಮದ್ ಯಾಕೂಬ್-ರಕ್ಷಣಾ ಸಚಿವ

ಅಲ್ಹಜ್ ಮುಲ್ಲಾ ಸಿರಾಜುದ್ದೀನ್ ಹಕ್ಕಾನಿ- ಆಂತರಿಕ ಸಚಿವ

ಮೌಲ್ವಿ ಅಮೀರ್ ಖಾನ್ -ವಿದೇಶಾಂಗ ಸಚಿವ

ಮುಲ್ಲಾ ಹಿದಾಯತುಲ್ಲಾ ಬದ್ರಿ-ಹಣಕಾಸು ಸಚಿವ

ಶೇಖ್ ಮೌಲ್ವಿ ನೂರುಲ್ಲಾ ಮುನಿರ್-ಶಿಕ್ಷಣ ಸಚಿವ

ಮುಲ್ಲಾ ಖೈರುಲ್ಲಾ- ಮಾಹಿತಿ ಮತ್ತು ತಂತ್ರಜ್ಞಾನ ಸಚಿವ

ಖಾರಿ ದಿನ ಮೊಹಮ್ಮದ್ ಸಾಖಿಬ್-ಹಜ್ ಸಚಿವ

ಮೌಲ್ವಿ ಅಬ್ದುಲ್ ಹಾಖಿಮ್-ಕಾನೂನು ಸಚಿವ

ಮುಲ್ಲಾ ನೂರುಲ್ಲಾ ನೂರಿ- ಗಡಿ ಹಾಗೂ ಬುಡಗಕಟ್ಟು ವ್ಯವಹಾರಗಳ ಸಚಿವ

ಮುಲ್ಲಾ ಮೊಹಮ್ಮದ್ ಯೂನಸ್-ಅಭಿವೃದ್ಧಿ ಸಚಿವ

ಶೇಖ್ ಮೊಹಮ್ಮದ್ ಖಾಲಿದ್-ದಾವತ್ ಹಾಗೂ ಇರ್ಷಾದ್ ಸಚಿವ

ಮುಲ್ಲಾ ಅಬ್ದುಲ್ ಮನನ್ ಉಮೇರಿ-ಸಾರ್ವಜನಿಕ ಸೇವೆ ಸಚಿವ

ಮುಲ್ಲಾ ಮೊಹಮ್ಮದ್ ಎಸ್ಸಾ ಅಖುಂದ್-ಮಿನರಲ್ಸ್ ಹಾಗೂ ಪೆಟ್ರೋಲಿಯಂ ಸಚಿವ

ಮುಲ್ಲಾ ಅಬ್ದುಲ್ ಲತೀಫ್ ಮನ್ಸೂರ್- ಜಲ ಹಾಗೂ ವಿದ್ಯುತ್ ಸಚಿವ

ಹಮೀದುಲ್ಲಾ ಅಖುಂಡ್ಜಾದಾ-ಸಾರಿಗೆ ಹಾಗೂ ವಿಮಾನಯಾನ ಸಚಿವ

ಅಬ್ದುಲ್ ಹಕ್ಕಾನಿ-ಸಂವಹನ ಸಚಿವ

ಖಾಲಿಲ್ ಉರ್ ರೆಹಮಾನ್ ಹಕ್ಕಾನಿ-ನಿರಾಶ್ರಿತ ಸಚಿವ

ಅಬ್ದುಲ್ ಹಖ್ ವಸೀಖ್-ಇಂಟೆಲಿಜೆನ್ಸ್ ಮುಖ್ಯಸ್ಥ

ಹಾಕಿ ಮೊಹಮ್ಮದ್ ಇದ್ರಿಸ್-ಅಫ್ಘಾನಿಸ್ತಾನ ಬ್ಯಾಂಕ್‌ನ ಇಂಚಾರ್ಜ್

ಮೌಲ್ವಿ ಅಹಮದ್ ಜಾನ್ ಅಹ್ಮೇದಿ-ಆಡಳಿತಾತ್ಮಕ ವ್ಯವಹಾರಗಳ ಉಸ್ತುವಾರಿ

ಮುಲ್ಲಾ ಮೊಹಮ್ಮದ್ ಫಾಜಿಲ್-ಉಪ ರಕ್ಷಣಾ ಸಚಿವ

ಖಾರಿ ಫಸೆಹುದ್ದೀನ್-ಸೇನಾ ಮುಖ್ಯಸ್ಥ

ಶೇರ್ ಮೊಹಮ್ಮದ್ ಅಬ್ಬಾಸ್-ಉಪ ಆತಂತರಿಕ ಸಚಿವ

ಜಬಿವುಲ್ಲಾ ಮುಜಾಹಿದ್-ಉಪ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ

ಮುಲ್ಲಾ ತಾಜ್ ಜಾವದ್-ಇಂಟೆಲಿಜೆನ್ಸ್

ಮುಲ್ಲಾ ರೆಹಮತುಲ್ಲಾ-ಆಡಳಿತಾತ್ಮಕ

ಮುಲ್ಲಾ ಅಬ್ದುಲ್ ಹಖ್-ಆಂತರಿಕ ಸಚಿವರ ವಿಶೇಷ ಸಹಾಯಕ

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]