
ವಾಷಿಂಗ್ಟನ್ (07.04.2021) : ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತೊಮ್ಮೆ ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಪ್ರಮುಖ ವಿಷಯ ಎಂದರೆ ಈ ಪಟ್ಟಿಯಲ್ಲಿ ಜಗತ್ತಿನ 10ನೇ ಶ್ರೀಮಂತರಾಗಿ ಇವರು ಹೊರಹೊಮ್ಮಿದ್ದಾರೆ. ಚೀನಾದ ಶ್ರೀಮಂತ ಉದ್ಯಮಿ ಜಾಕ್ ಮಾ ಅವರನ್ನು ಮುಕೇಶ್ ಈ ಬಾರಿ ಹಿಂದಿಕ್ಕಿದ್ದಾರೆ
ಪೋರ್ಬ್ಸ್ ಬಿಡುಗಡೆ ಮಾಡಿರುವ 35ನೇ ವಾರ್ಷಿಕ ಪಟ್ಟಿಯಲ್ಲಿ ವಿಶ್ವದ ಕೋಟ್ಯಧೀಶ್ವರರಲ್ಲಿ ಅಮೆಜಾನ್ನ ಸಿಇಒ ಹಾಗೂ ಸಂಸ್ಥಾಪಕ ಜೆಫ್ ಬೇಜೋಸ್ ಅವರು ಸತತ ನಾಲ್ಕನೇ ಬಾರಿಗೆ ವಿಶ್ವದ ಅಗ್ರಗಣ್ಯ ಶ್ರೀಮಂತ ಎನಿಸಿಕೊಂಡಿದ್ದಾರೆ.
ಇವರ ಒಟ್ಟು ಆಸ್ತಿ ಮೌಲ್ಯ 177 ಬಿಲಿಯನ್ ಅಮೆರಿಕನ್ ಡಾಲರ್. ಶ್ರೀಮಂತರ ಪಟ್ಟಿಯಲ್ಲಿ ಸ್ಪೇಸ್ ಎಕ್ಸ್ ಸ್ಥಾಪಕ ಎಲಾನ್ ಮಸ್ಕ್ ಎರಡನೇ ಸ್ಥಾನ ಪಡೆದಿದ್ದಾರೆ.
ಮುಕೇಶ್ ಅವರ ಒಟ್ಟು ಆಸ್ತಿ ಮೌಲ್ಯವು 84.5 ಶತಕೋಟಿ ಡಾಲರ್ ಆಗಿದೆ. ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಅದಾನಿ ಗ್ರೂಪ್ನ ಅಧ್ಯಕ್ಷ ಗೌತಮ್ ಅದಾನಿ ಎರಡನೇ ಸ್ಥಾನ ಪಡೆದಿದ್ದು, ಜಾಗತಿಕವಾಗಿ 24ನೇ ಸ್ಥಾನ ಪಡೆದಿದ್ದಾರೆ .