Wednesday, June 23 , 2021
ಕರ್ನಾಟಕದಲ್ಲಿ ಲಾಕ್‌ಡೌನ್, ಏನಿರುತ್ತೆ? ಏನಿರಲ್ಲ? : ಇಲ್ಲಿದೆ ಮಾಹಿತಿ!

ಬೆಂಗಳೂರು (08.05.2021): ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ರಾಜ್ಯವನ್ನು ಸಂಪೂರ್ಣ ಲಾಕ್‌ಡೌನ್ ಮಾಡುವ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮೇ 10 ರ ಬೆಳಗ್ಗೆ 6ಗಂಟೆಯಿಂದ 24 ರ ಬೆಳಿಗ್ಗೆ 6 ಗಂಟೆಯವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಲಾಕ್​ಡೌನ್​ ಮಾರ್ಗಸೂಚಿ ಇಲ್ಲಿದೆ:

ಏನಿರಲಿದೆ:

 • ಅಗತ್ಯ ವಸ್ತುಗಳನ್ನು ಖರೀದಿಸಲು ವಾಹನದಲ್ಲಿ ಹೋಗುವ ಹಾಗಿಲ್ಲ, ನಡೆದುಕೊಂಡೆ ಅಂಗಡಿಗಳಿಗೆ ಹೋಗಬೇಕು
 • ಆಹಾರ, ಹಾಲು, ಹಣ್ಣು ಮಾಂಸದ ಅಂಗಡಿ ಮಾರಾಟಕ್ಕೆ ಅವಕಾಶ(ಬೆಳಗ್ಗೆ 6 ರಿಂದ 10 ಗಂಟೆ)
 • ತಳ್ಳುಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಅವಕಾಶ. (ಬೆಳಗ್ಗೆ 6 ರಿಂದ ಸಂಜೆ 6 ಅವಕಾಶ).
 • ಎಲ್ಲಾ ಬಗ್ಗೆ ವೈದ್ಯಕೀಯ ಸೇವೆ, ತುರ್ತು ಚಿಕಿತ್ಸೆಗೆ ತೆರಳಲು ಅವಕಾಶ.
 • ಕೋವಿಡ್ ನಿಯಮಾವಳಿಯಂತೆ ಶೇ 50ರಷ್ಟು ಹಾಜರಾತಿಯೊಂದಿಗೆ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಲಿವೆ. ರಸ್ತೆ ಕಾಮಗಾರಿ, ಕಟ್ಟಡ ಕಾಮಗಾರಿ ಯಾವುದೇ ರೀತಿಯ ಅಡ್ಡಿಯಿಲ್ಲ.
 • ವಿವಾಹ/ಶುಭ ಕಾರ್ಯಕ್ರಮದಲ್ಲಿ 50 ಜನ ಮಾತ್ರ ಭಾಗವಹಿಸಲು ಅವಕಾಶ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುವುದು.

 

ಏನಿರಲ್ಲ?

 • ಅಂಗಡಿ ಮುಂಗ್ಗಟ್ಟು, ಮಾರುಕಟ್ಟೆ, ಶಾಪಿಂಗ್ ಮಾಲ್, ಸಿನಿಮಾ ಮಂದಿರ, ಹೊಟೆಲ್, ರೆಸಾರ್ಟ್, ಕೈಗಾರಿಕಾ ಚಟುವಟಿಕೆ ನಿಬಂಧಿಸಲಾಗಿದೆ.
 • ಬಸ್ ಸಂಚಾರ ಇಲ್ಲ:
 • ಕೆಎಸ್ಸಾರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಸೇರಿದಂತೆ ಸಾರಿಗೆ ಸಂಚಾರ 14 ದಿನಗಳ ಕಾಲ ಬಂದ್ ಆಗಲಿದೆ. ಅಂತಾರಾಜ್ಯ ಬಸ್ ಸಂಚಾರವೂ ಸ್ಥಗಿತ. ಖಾಸಗಿ ವಾಹನಗಳಲ್ಲಿ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.
 • ಸಿನಿಮಾ ಹಾಲ್, ಗ್ರಂಥಾಲಯ, ರಂಗಮಂದಿರ, ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳ ಎಲ್ಲವೂ ಬಂದ್.
 • ಹೋಟೆಲ್, ರೆಸ್ಟೋರೆಂಟ್ ಬಂದ್ ಆಗಿರಲಿದ್ದು, ಪಾರ್ಸೆಲ್ ವ್ಯವಸ್ಥೆಗೆ ಅನುಮತಿ ಇರಲಿದೆ.
 • ಮದ್ಯ ಮಳಿಗೆಯಲ್ಲಿ ಪಾರ್ಸೆಲ್ ವ್ಯವಸ್ಥೆಗೆ ಮಾತ್ರ ಅನುಮತಿ (ನಿರ್ಬಂಧಿತ ಅವಧಿ ಬೆಳಗ್ಗೆ 6 ರಿಂದ 10)

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]