Friday, April 16 , 2021
ದಲಿತ, ಜನಪರ ಸಾಹಿತ್ಯ ಧನಾತ್ಮಕವಾಗಿ ರೂಪುಗೊಳ್ಳಲಿ| ಶಾಸಕ ಎನ್.ಮಹೇಶ್

ಹಾಸನ (04-04-2021): ಸಾಹಿತ್ಯ ಎಂಬುದು ಸಮಾಜದ ಪರಿವರ್ತನಾ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಋಣಾತ್ಮಕ ಸಾಹಿತ್ಯ ಸಮಾಜದ ಮೇಲೆ ಋಣಾತ್ಮಕ ಪ್ರಭಾವ ಬೀರಿದರೆ,  ಧನಾತ್ಮಕ ಸಾಹಿತ್ಯ ಧನಾತ್ಮಕ ಪ್ರಭಾವ ಬೀರುತ್ತದೆ. ಈ ನಿಟ್ಟಿನಲ್ಲಿ ದಲಿತ, ‌ಜನಪರ ಸಾಹಿತ್ಯ ರಚನೆ ಸಾಧ್ಯವಾಗಲಿ ಎಂದು ಎನ್.ಮಹೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಸನದಲ್ಲಿ ನಾಗಭೂಮಿ ವಿವಿಧೋದ್ದೇಶ ಅಭಿವೃದ್ಧಿ ಸಂಸ್ಥೆ ಮತ್ತು ಇತರ ಜನಪರ ಸಂಘಟನೆಗಳ ಸಹಯೋಗದಲ್ಲಿ ನಡೆದ 6 ನೇ ಹಾಸನ ಜಿಲ್ಲಾ ದಲಿತ ಮತ್ತು ಜನಪರ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದಲಿತ, ಜನಪರ ಎರಡೂ ಸಹ ಒಂದೇ. ದಲಿತಪರ ಅಂದರೆ ಜನಪರ ಅಂತಲೇ ಅರ್ಥ. ದಲಿತ ಸಾಹಿತ್ಯ ಎಂಬುದು ಸಾಂದರ್ಭಿಕ ಘಟನೆಗಳಿಗೆ ಪ್ರತಿಕ್ರಿಯಿಸುತ್ತಾ ನಿಂತುಬಿಡಬಾರದು, ಅಲ್ಲಲ್ಲಿ ಆಗಾಗ್ಗೆ ಅಂತಹ ಘಟನೆಗಳು ಜರುಗುತ್ತವೆ. ನಾವು ಅದನ್ನು ನಮ್ಮ ಹಾದಿಯಿಂದ ಪಕ್ಕಕ್ಕೆ ಸರಿಸಿ ಮುಂದೆ ಸಾಗುವ ಧನಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಮುಂದುವರೆದು ಮಾತನಾಡುತ್ತಾ ದಲಿತರು, ಜನಪರರು ಪ್ರತಿಕ್ರಿಯಾತ್ಮಕ ಆಲೋಚನೆಗಳಿಗಿಂತಲೂ ರಚನಾತ್ಮಕ, ‌ಕ್ರಿಯಾತ್ಮಕ ಆಲೋಚನಾ ಮನೋಭಾವ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಬದಲಾಗಬೇಕೆಂದು ತಿಳಿಸಿದರು. ಮಾತೆ ಸಾವಿತ್ರಿ ಭಾಫುಲೆ ಯಾವ ರೀತಿ ಅಡೆತಡೆಗಳ ಮೀರಿ ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು ಎಂಬುದನ್ನು ನಿದರ್ಶನವಾಗಿಟ್ಟುಕೊಟ್ಟು, ಅವರಂತೆಯೇ ನಾವು ಧನಾತ್ಮಕ ರೂಪದಲ್ಲಿ ಬದಲಾಗಬೇಕು. ಈ ನಿಟ್ಟಿನಲ್ಲಿ ಸಾಹಿತ್ಯವೂ ಸಹ ರೂಪುಗೊಳ್ಳಲಿ ಎಂದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]