
ಬೆಂಗಳೂರು( 22.1.2021) ಕನ್ನಡ ಕಿರುತೆರೆಯ ಬಹುದೊಡ್ಡ ಶೋ ಅಗಿರುವ ಬಿಗ್ ಬಾಸ್ 8 ನೇ ಆವೃತ್ತಿ ಇದೇ ಫೆಬ್ರವರಿಯಿಂದ ಶುರುವಾಗಲಿದೆ. ಈ ಕುರಿತು ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಮಾಹಿತಿ ನೀಡಿದ್ದಾರೆ.
ಜೊತೆಗೆ ಬಿಗ್ ಬಾಸ್ ನಡೆಸಿಕೊಡುವ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪರಮೇಶ್ವರ್, ಕನ್ನಡದ ಬಿಗ್ ಬಾಸ್ ಇದೇ ಫೆಬ್ರವರಿಯಿಂದ ಶುರುವಾಗಲಿದೆ ಎಂದು ತಿಳಿಸಿದ್ದಾರೆ.
ಕೊರೊನಾ ಕಾರಣದಿಂದ ಬಿಗ್ ಬಾಸ್ ತಡವಾಗಿ ಆರಂಭಗೊಳ್ಳುತ್ತಿದೆ. ಈಗಾಗಲೇ ಪ್ರಾರಂಭಕ್ಕೆ ಹಲವಾರು ಸಿದ್ಧತೆಗಳು ನಡೆಯುತ್ತಿದ್ದು, ಇಂದಿನಿಂದ ಪ್ರೋಮೋ ಶೂಟ್ ಕೂಡ ಶುರುವಾಗಿದೆ. ಶೂಟಿಂಗ್ನಲ್ಲಿ ಸುದೀಪ್ ಕೂಡ ಭಾಗಿಯಾಗಿದ್ದು, ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.