Friday, December 4 , 2020
ಐಪಿಎಸ್ ಅಧಿಕಾರಿ ರೂಪಾ ಪಟಾಕಿ ಟ್ವೀಟ್​ಗೆ ಬ್ಲಾಸ್ಟ್ ಆದ ಕಂಗನಾ: ಇಬ್ಬರ ನಡುವೆ ಟ್ವೀಟ್ ವಾರ್
kangana

ಬೆಂಗಳೂರು (18.11.2020): ಪಟಾಕಿ ಬಗ್ಗೆ ಐಪಿಎಸ್ ಅಧಿಕಾರಿ ಡಿ. ರೂಪಾ ಮಾಡಿರುವ ಟ್ವೀಟ್​ಗೆ ಭಾರೀ ಪರ ವಿರೋಧದ ಚರ್ಚೆ ಆಗುತ್ತಿದೆ. ನಟಿ ಕಂಗನಾ ರಣಾವತ್ ಕೂಡ ಈ ಚರ್ಚೆಗೆ ಬಂದಿದ್ದು, ರೂಪಾ ವಿರುದ್ಧ ಪಠಾಕಿ ಸಿಡಿಸಿದ್ದಾರೆ.

ನವೆಂಬರ್‌ 14ರಂದು ರೂಪ ಪೋಸ್ಟ್ ಹಾಕಿದ್ದರು. ಅದರಲ್ಲಿ, ‘ಪಟಾಕಿ ಸಿಡಿಸುವುದು ಹಿಂದೂ ಸಂಸ್ಕೃತಿಯೊಂದಿಗೆ ಮೊದಲಿನಿಂದಲೂ ಬಂದದ್ದೇನಲ್ಲ. ಮಹಾಕಾವ್ಯಗಳು, ಪುರಾಣಗಳಲ್ಲಿಯೂ ಪಟಾಕಿಯ ಕುರಿತಂತೆ ಯಾವುದೇ ಉಲ್ಲೇಖವಿಲ್ಲ. ಪಟಾಕಿ ಭಾರತಕ್ಕೆ ಕಾಲಿಟ್ಟಿದ್ದು, ಯುರೋಪಿಯನ್ನರ ಜತೆ’ ಎಂದು ಬರೆದುಕೊಂಡಿದ್ದರು. ಈ ಫೋಸ್ಟ್ ಈಗ ಭಾರೀ ವೈರಲ್ ಆಗಿ ಎಲ್ಲೆಡೆ ಚರ್ಚೆ ಆಗುತ್ತಿದೆ.

ಇನ್ನು ಈ ಫೋಸ್ಟ್​​ಗೆ ಕೆಲವರು ಕೆಟ್ಟದ್ದಾಗಿ ಕಾಮೆಂಟ್ ಹಾಕಿದ್ದ ಕಾರಣಕ್ಕೆ ಅವರನ್ನು ಬ್ಲಾಕ್ ಮಾಡುವುದಾಗಿ ರೂಪಾ ಹೇಳಿದ್ದರು. ಇದಕ್ಕೆ ಎಂಟ್ರಿ ಕೊಟ್ಟ ಕಂಗನಾ, ಸಾಮಾನ್ಯ ಜನರ ಮೂಲಭೂತ ಹಕ್ಕುಗಳನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರವು ಡಿ.ರೂಪಾ ಅವರಂತಹ ಜನರನ್ನು ನೇಮಿಸುತ್ತದೆ. ಆದರೆ, ಅವರು ನೋಡಿದರೆ ಸತ್ಯ ಆಧಾರಗಳಿಂದ ವಾದದಲ್ಲಿ ಗೆಲ್ಲುವ ಬದಲು ಖಾತೆಗಳನ್ನೇ ಬ್ಲಾಕ್ ಮಾಡಿದ್ದಾರೆ, ನಿಮಗೆ ನಾಚಿಗೆಯಾಗಬೇಕು’ ಎಂದಿದ್ದಾರೆ.

‘ಮೀಸಲಾತಿಯ ಅಡ್ಡ ಪರಿಣಾಮಕ್ಕೆ ಉದಾಹರಣೆ ಇದು. ಯೋಗ್ಯರಲ್ಲದವರಿಗೆ ಅಧಿಕಾರ ದೊರೆತರೆ ಅವರು ಶಮನಗೊಳಿಸುವ ಕಾರ್ಯಕ್ಕಿಂತ ಘಾಸಿ ಮಾಡುತ್ತಾರೆ. ಅವರ ವೈಯಕ್ತಿಕ ಜೀವನದ ಬಗ್ಗೆ ನನಗೆ ಎನೂ ತಿಳಿದಿಲ್ಲ, ಆದರೆ ಅವರ ಅಸಾಮರ್ಥ್ಯದಿಂದಾಗಿ ಹತಾಶೆ ಹೊರಬರುತ್ತಿರುವುದು ಖಂಡಿತ’ ಎಂದಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]