
ಮಂಗಳೂರು (08.04.2021) : ರಾಜ್ಯ ರಸ್ತೆ ಸಾರಿಗೆ ನೌಕರರು ಕೋಡಿಹಳ್ಳಿ ಚಂದ್ರಶೇಖರ್ ನಾಯಕತ್ವವನ್ನು ಬಿಟ್ಟು, ಸರ್ಕಾರದ ಜೊತೆ ಮಾತುಕತೆ ನಡೆಸಲಿ ಆಗ ಅವರ ಸಮಸ್ಯೆ ಆಲಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಾರಿಗೆ ನೌಕರರ ಬೇಡಿಕೆ ಒಂದು ಪರ್ಸೆಂಟ್ ಕೂಡಾ ನ್ಯಾಯ ಸಮ್ಮತವಾಗಿಲ್ಲ. ಸರ್ಕಾರ ಈ ಬೇಡಿಕೆಯನ್ನು ಒಪ್ಪುವುದಕ್ಕೂ ಸಾಧ್ಯವಿಲ್ಲ. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿದರೆ ಎಲ್ಲಾ ಇಲಾಖೆಗಳ ನೌಕರರೂ ಇದೇ ಮನವಿಯನ್ನು ಮಾಡುತ್ತಾರೆ ಎಂದರು.
ಕೋಡಿಹಳ್ಳಿ ಸರ್ವಾಧಿಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯೋದಿಲ್ಲ. ಕೋಡಿಹಳ್ಳಿ ಉದ್ದೇಶ ಕೇವಲ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಕುಂಠಿತಗೊಳಿಸುವುದಾಗಿದೆ ಎಂದು ಹರಿಹಾಯ್ದರು.