Wednesday, June 23 , 2021
ಐಪಿಎಲ್​: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್​ ರಾಯಲ್ಸ್​ಗೆ ಗೆಲುವು!

ಮುಂಬೈ (16.04.2021) : ವಾಂಖೆಡೆ ಮೈದಾನದಲ್ಲಿ ನಡೆದ ಮ್ಯಾಚ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ರಾಜಸ್ಥಾನ ರಾಯಲ್ಸ್​ ತಂಡ ರೋಚಕ ಜಯ ತನ್ನದಾಗಿಸಿಕೊಂಡಿದೆ.

ಟಾಸ್​ ಗೆದ್ದ ರಾಜಸ್ಥಾನ್​ ಫೀಲ್ಡಿಂಗ್ ಆಯ್ದುಕೊಂಡು ರಾಯಲ್ಸ್​ ತಂಡದ ನಾಯಕ ಸಾಮ್ಸನ್ ಡೆಲ್ಲಿ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿದರು. ಶ್ರೇಯಸ್ ಗೋಪಾಲ್ ಬದಲು ತಂಡ ಸೇರಿಕೊಂಡಿದ್ದ ಎಡಗೈ ವೇಗಿ ಜಯದೇವ್ ಉನಾದ್ಕಟ್ ತಮ್ಮ ಮೊದಲ ಮೂರು ಓವರ್​ಗಳಲ್ಲಿ ಕ್ರಮವಾಗಿ ಪೃಥ್ವಿ ಶಾ(2), ಶಿಖರ್​ ಧವನ್​(9) ಮತ್ತು ಅಜಿಂಕ್ಯ ರಹಾನೆ(8) ವಿಕೆಟ್ ಪಡೆದು ಡೆಲ್ಲಿ ಆಘಾತ ನೀಡಿದರು.

ಇವರ ನಂತರ ದಾಳಿಗಿಳಿದ ಮುಸ್ತಫಿಜುರ್ ಖಾತೆ ತೆರೆಯುವ ಮುನ್ನವೇ ಮಾರ್ಕಸ್ ಸ್ಟೋಯ್ನಿಸ್​ ವಿಕೆಟ್ ಪಡೆದರು. ತಂಡದ ಮೊತ್ತ 37ಕ್ಕೆ 4 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಬೀತಿಯಲ್ಲಿದ್ದ ಡೆಲ್ಲಿಗೆ ನಾಯಕ ಪಂತ್ ಮತ್ತು ಇಂದೇ ಪದಾರ್ಪಣೆ ಮಾಡಿದ ಲಲಿತ್ ಯಾದವ್​ 5ನೇ ವಿಕೆಟ್​ಗೆ 51 ರನ್​ ಸೇರಿಸಿ ಚೇತರಿಕೆ ನೀಡಿದರು.

ಅರ್ಧಶತಕ ಪೂರೈಸಿ ಉತ್ತಮವಾಗಿ ಆಡುತ್ತಿದ್ದ ಪಂತ್ ಇಲ್ಲದ ರನ್ ಕದಿಯಲು ಹೋಗಿ ಪರಾಗ್ ಅವರ ಡೈರೆಕ್ಟ್​ ಹಿಟ್​ಗೆ ಬಲಿಯಾದರು. ಅವರು 32 ಎಸೆತಗಳಲ್ಲಿ 9 ಬೌಂಡರಿ ಸಹಿತ 51 ರನ್​ಗಳಿಸಿದ್ದರು. ಇವರ ವಿಕೆಟ್​ನೊಂದಿಗೆ ಡೆಲ್ಲಿ ತಂಡದ ಸ್ಪರ್ಧಾತ್ಮಕ ಮೊತ್ತದ ಆಸೆಯೂ ಕಮರಿತು.ಕೊನೆಗೆ ಲಲಿತ್ ಯಾದವ್​ 20 , ಟಾಮ್ ಕರ್ರನ್ 21 ಮತ್ತು ಕ್ರಿಸ್ ವೋಕ್ಸ್​ ಅಜೇಯ 15 , ಅಶ್ವಿನ್ 7 ಮತ್ತ ರಬಾಡ 9 ರನ್​ಗಳಿಸಿದರು.

ಜಯದೇವ್ ಉನಾದ್ಕಟ್ ಮತ್ತು ಮುಸ್ತಫಿಜುರ್ ರೆಹಮಾನ್ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 147 ರನ್​ಗಳಿಸಿದ್ದು, ಡೆಲ್ಲಿಗೆ 148ರನ್​ಗಳ ಸಾಧಾರಣ ಗುರಿ ನೀಡಿತು.ರಾಜಸ್ತಾನ ಪರ ಜಯದೇವ್ ಉನಾದ್ಕಟ್ 3 ವಿಕೆಟ್​ಗಳನ್ನು ಪಡೆದ್ರೆ, ಮುಸ್ತಫಿಜುರ್ ರೆಹಮಾನ್ 2 ವಿಕೆಟ್​ಗಳನ್ನು ಪಡೆದು ಮಿಂಚಿದರು. ಇನ್ನು ಕ್ರಿಸ್​ ಮೋರಿಸ್​ 1 ವಿಕೆಟ್​ ಪಡೆದರು.

ಸಾಧಾರಣ ಮೊತ್ತವನ್ನು ಬೆನ್ನತ್ತಿದ್ದ ರಾಜಸ್ಥಾನ ರಾಯಲ್ಸ್​ಗೆ ಡೆಲ್ಲಿ ಬೌಲರ್​ಗಳು ತೀವ್ರ ಆಘಾತ ನೀಡಿದ್ದರು. ಕೇವಲ 42 ರನ್​ಗಳಿಗೆ 5 ವಿಕೆಟ್​ಗಳನ್ನು ಕಳೆದುಕೊಂಡು ರಾಜಸ್ಥಾನ ತಂಡ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಮನನ್​ ವೋಹ್ರಾ 9 ರನ್​, ಬಟ್ಲರ್​ 2 ರನ್​, ನಾಯಕ ಸಂಜು ಸ್ಯಾಮ್ಸನ್​ 4 ರನ್​, ಶಿವಂ ದುಬೆ 2 ರನ್​ ಮತ್ತು ರಿಯಾನ್​ ಪರಾಗ್​ 2 ರನ್​ ಕಲೆ ಹಾಕಿ ಪೆವಿಲಿಯನ್​ ಹಾದಿ ಹಿಡಿದರು.

ಕ್ರಿಸ್​​ ವೋಕ್ಸ್​, ರಬಾಡ ಮತ್ತು ಅವೇಶ್​ ಖಾನ್​ ದಾಳಿಗೆ ರಾಜಸ್ಥಾನ ತತ್ತರಿಸಿತ್ತು. ಕೇವಲ 42 ರನ್​ಗಳಿಗೆ 5 ವಿಕೆಟ್​ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ ರಾಜಸ್ಥಾನ ತಂಡಕ್ಕೆ ಸೋಲಿನ ಭೀತಿ ಎದುರಾಯ್ತು.ಐದನೇ ಕ್ರಮಾಂಕದಲ್ಲಿ ಬಂದ ಡೆವಿಡ್​ ಮಿಲ್ಲರ್​ ಜವಾಬ್ದಾರಿಯುತ ಆಟವಾಡಿದರು. ನಿಧಾನಗತಿಯಲ್ಲೇ ಡೆಲ್ಲಿ ಬೌಲರ್​ಗಳ ಬೇವರಿಳಿಸಿದರು. ಕೇವಲ 43 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ 62 ರನ್​ಗಳನ್ನು ಕಲೆ ಹಾಕುವ ಮೂಲಕ ಗೆಲುವಿನ ಆಸೆಯನ್ನು ಜೀವಂತಗೊಳಿಸಿದರು. ಡೆವಿಡ್​ ಮಿಲ್ಲರ್​ಗೆ ರಾಹುಲ್​ ತೆವಾಟಿಯಾ ಸಾಥ್​ ನೀಡಿದ್ದರು. ರಾಹುಲ್​ ತೆವಾಟಿಯ 19 ರನ್​ಗಳನ್ನು ಗಳಿಸಿ ರಬಾಡ ಬೌಲಿಂಗ್​ನಲ್ಲಿ ವಿಕೆಟ್​ವೊಪ್ಪಿಸಿದರು.

ರಾಹುಲ್​ ತೆವಾಟಿಯಾ ಔಟಾದ ಬಳಿಕ ಡೆವಿಡ್​ ಮಿಲ್ಲರ್​ ಹೆಚ್ಚು ಹೊತ್ತು ಕ್ರಿಸ್​ನಲ್ಲಿ ಉಳಿಯಲಿಲ್ಲ. 62 ರನ್​ಗಳನ್ನು ಗಳಿಸಿದ್ದ ಡೆವಿಡ್​ ಮಿಲ್ಲರ್ ಅವೀಶ್​ ಖಾನ್​ಗೆ ಬಲಿಯಾದರು. ಗೆಲುವಿನ ಆಸೆ ಕಂಡಿದ್ದ ರಾಜಸ್ಥಾನ ತಂಡಕ್ಕೆ ಮತ್ತೆ ನಿರಾಸೆ ಮೂಡಿತು. ಆಗ ತಂಡಕ್ಕೆ ಆಸರೆಯಾಗಿದ್ದು ಕ್ರಿಸ್​ ಮೋರಿಸ್​.ಡೆವಿಡ್ ಮಿಲ್ಲರ್​ ಔಟಾದ ಬಳಿಕ ಕ್ರಿಸ್​ ಮೋರಿಸ್​ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ಕೇವಲ 18 ಎಸೆತಗಳಲ್ಲಿ ​4 ಸಿಕ್ಸರ್​ಗಳ ನೆರವಿನಿಂದ 38 ರನ್​ಗಳನ್ನು ಕಲೆ ಹಾಕುವ ಮೂಲಕ ತಂಡವನ್ನು ಗೆಲುವನಿ ದಡ ಸೇರಿಸಿದರು. ಜಯದೇವ್​ ಉನಾದ್ಕಟ್​ 11 ರನ್​ಗಳನ್ನು ಗಳಿಸಿ ಅಜೇಯರಾಗಿ ಉಳಿದರು.ಒಟ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ನೀಡಿದ ಮೊತ್ತವನ್ನು ಬೆನ್ನತ್ತಿದ್ದ ರಾಜಸ್ಥಾನ ತಂಡ 19.4 ಓವರ್​ಗಳಲ್ಲಿ 7 ವಿಕೆಟ್​ಗಳ ನಷ್ಟಕ್ಕೆ 150 ರನ್​ಗಳನ್ನು ಕಲೆ ಹಾಕುವ ಮೂಲಕ 3 ವಿಕೆಟ್​ಗಳ ರೋಚಕ ಜಯ ಪಡೆದುಕೊಂಡಿತು.

ಶುಕ್ರವಾರ ಸಂಜೆ 7.30ಕ್ಕೆ ಪಂಬಾಬ್​ ಕಿಂಗ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಡುವೆ ಪಂದ್ಯ ನಡೆಲಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]