
ಬ್ರಿಸ್ಬೇನ್(13.1.2021): ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಬ್ರಿಸ್ಬೇನ್ಗೆ ಬಂದಿಳಿರುವ ಭಾರತ ಕ್ರಿಕೆಟ್ ತಂಡ ಅಲ್ಲಿ ಕ್ವಾರಂಟೈನ್ ಆಗಲು ಮೂಲಭೂತ ಸೌಲಭ್ಯಗಳ ಕೊರತೆಯಿರುವ ಹೋಟೆಲ್ ನೀಡಿದ್ದು, ಭಾರತೀಯ ಕ್ರಿಕೆಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಭಾರತೀಯ ಆಟಗಾರರಿಗೆ ನೀಡಿರುವ ಹೋಟೆಲ್ನಲ್ಲಿ ರೂಮ್ ಸರ್ವೀಸ್ ಅಥವಾ ಹೌಸ್ ಕೀಪಿಂಗ್ ಸೌಲಭ್ಯವಿಲ್ಲ. ಜಿಮ್ ಅತ್ಯಂತ ಸಾಧಾರಣವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಿಗೆ ಅದು ಸರಿಹೊಂದುವುದಿಲ್ಲ. ಸ್ವಿಮ್ಮಿಂಗ್ ಪೂಲ್ ಸೌಲಭ್ಯವಿಲ್ಲ ಎಂದು ಬಿಸಿಸಿಐ ಮುಂದೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಆರೋಪಿಸಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಸಿಇಒ ಹೇಮಂಗ್ ಅಮಿನ್ ಕ್ರಿಕೆಟ್ ಆಸ್ಟ್ರೆಲಿಯಾದ ಅಧಿಕಾರಿಗಳೊಡನೆ ಮಾತನಾಡಿದ್ದಾರೆ. ಈ ಮಾತುಕತೆಯ ನಂತರ ಭಾರತೀಯ ಕ್ರಿಕೆಟಿಗರಿಗೆ ಯಾವುದೆ ಕೊರತೆ ಬಾರದಂತೆ ನೋಡಿಕೊಳ್ಳುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಭರವಸೆ ನೀಡಿದೆ ಎಂದು ತಿಳಿದು ಬಂದಿದೆ.