Monday, July 26 , 2021
ವಿಶ್ವಕಪ್ ಟೂರ್ನಿ ರದ್ದಾದರೆ, ಕ್ರಿಕೆಟ್ ಗೆ ದೊಡ್ಡ ನಷ್ಟ: ಸೌರವ್ ಗಂಗೂಲಿ

ಕೋಲ್ಕತಾ(08.07.2021) : ಕೊರೊನಾ ಕಾರಣಕ್ಕೆ ಈ ವರ್ಷವೂ ಏನಾದರೂ ಟಿ20 ವಿಶ್ವಕಪ್ ರದ್ದುಗೊಂಡರೆ ಅದು ಕ್ರಿಕೆಟ್ ಆಟಕ್ಕೆ ಆಗುವ ದೊಡ್ಡ ನಷ್ಟ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕದ ನಡುವೆಯೇ ಟಿ20 ವಿಶ್ವಕಪ್ ಟೂರ್ನಿ ಆಯೋಜನೆ ಕುರಿತು ಎದ್ದಿರುವ ಪ್ರಶ್ನೆಗಳ ಕುರಿತಂತೆ ಪ್ರತರಿಕ್ರಿಯಿಸಿ, ಸೌರವ್ ಗಂಗೂಲಿ, ಕಳೆದ ವರ್ಷವೂ ಕೂಡ ವಿಶ್ವಕಪ್ ಟೂರ್ನಿ ಕೋವಿಡ್ ಕಾರಣದಿಂದಾಗಿ ರದ್ದಾಗಿತ್ತು. ಈ ಬಾರಿಯೂ ಕೂಡ ಟೂರ್ನಿ ರದ್ದಾದರೆ ಅದು ಕ್ರಿಕೆಟ್ ಆಟಕ್ಕೆ ಆಗುವ ದೊಡ್ಡ ನಷ್ಟ ಎಂದಿದ್ದಾರೆ.

ಇನ್ನು ಭಾರತದಲ್ಲಿ ಮುಂದಿನ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲು ಉದ್ದೇಶಿಸಲಾಗಿದ್ದ ಟಿ20 ವಿಶ್ವಕಪ್‌ ಕ್ರಿಕೆಟ್‌ ಕೂಟವನ್ನು ಕೋವಿಡ್‌ ರೋಗ ಹಿನ್ನೆಲೆಯಲ್ಲಿ ಮತ್ತು ಆಟಗಾರರ ಆರೋಗ್ಯ ಸುರಕ್ಷತೆಯ ಕಾರಣಗಳಿಗಾಗಿ ಯುಎಇಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ಐಸಿಸಿಗೆ ಕೂಡ ಮಾಹಿತಿ ನೀಡಿದ್ದು, ಭಾರತದಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದೆ. ಆದರೂ ಆಟಗಾರರ ಮತ್ತು ಅಭಿಮಾನಿಗಳ ಆರೋಗ್ಯ ಸುರಕ್ಷೆಯ ದೃಷ್ಟಿಯಿಂದ ಕೂಟವನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಕೂಟ ಯುಎಇಯಲ್ಲಿ ನಡೆಯಲಿದ್ದರೂ ಬಿಸಿಸಿಐ ಆತಿಥ್ಯ ವಹಿಸಲಿದೆ ಎಂದು ಗಂಗೂಲಿ ಹೇಳಿದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]