Saturday, October 17 , 2020
ತಮಿಳಿಗರ ಹತ್ಯೆಯನ್ನು ನಾನೆಂದು ಸಮರ್ಥಿಸಿಕೊಂಡಿಲ್ಲ: ಮುತ್ತಯ್ಯ ಮುರಳೀಧರನ್​

ಚೆನ್ನೈ(17.10.2020): ಶ್ರೀಲಂಕಾದಲ್ಲಿ ಮುಗ್ಧ ತಮಿಳರ ಹತ್ಯೆ ಮಾಡಿರುವುದನ್ನು ತಾವು ಎಂದೂ ಸಮರ್ಥಿಸಿಕೊಂಡಿಲ್ಲ ಎಂದು ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಹೇಳುವ ಮೂಲಕ ತಮ್ಮ ಜೀವನ ಚರಿತ್ರೆಯಾಧಾರಿತ ತಮಿಳು ಚಿತ್ರ 800 ತಯಾರಾಗುತ್ತಿರುವ ಸಂದರ್ಭದಲ್ಲಿ ಉಂಟಾಗಿರುವ ರಾಜಕೀಯ ವಿವಾದಕ್ಕೆ ತೆರೆಯೆಳೆಯಲು ಪ್ರಯತ್ನಿಸಿದ್ದಾರೆ.

ಈ ವಿವಾದಕ್ಕೆ ಸಂಬಂಧಪಟ್ಟಂತೆ ತಮಿಳಿನಲ್ಲಿ ವಿವರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಶ್ರೀಲಂಕಾದಲ್ಲಿ ತಮಿಳಿಗನಾಗಿ ತಾವೂ ನಾಗರಿಕ ಯುದ್ಧವನ್ನು ಕಂಡ ಬಗೆಯನ್ನು ವಿವರವಾಗಿ ಬರೆದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ, ಮುರುಳೀದರನ್​ ಜೀವನ ಚರಿತ್ರೆಯಾದ 800 ಚಿತ್ರದಲ್ಲಿ ಮುರುಳಿ ಅವರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಇದಕ್ಕೆ ತಮಿಳು ಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಆದರೆ ಚಿತ್ರೋದ್ಯಮದ ಕೆಲವರು ವಿಜಯ್ ಸೇತುಪತಿ ಚಿತ್ರದಲ್ಲಿ ನಟಿಸಬಾರದು, ಚಿತ್ರವನ್ನು ಕೈಬಿಡಬೇಕೆಂದು ಸಹ ಒತ್ತಾಯಿಸಿದ್ದರೆ, ಕೆಲವರು ಅವರ ಪರ ಮಾತನಾಡಿದ್ದಾರೆ.ತಮ್ಮ ಜೀವನ ಕುರಿತು ಸಿನೆಮಾ ಮಾಡುತ್ತೇವೆಂದು ಬಂದಾಗ ಆರಂಭದಲ್ಲಿ ಒಪ್ಪಿರಲಿಲ್ಲ. ಆದರೂ ಕೊನೆಗೆ ತಾವು ಈ ಮಟ್ಟಕ್ಕೆ ಬೆಳೆಯಲು, ತಮ್ಮ ಸಾಧನೆಗೆ ಕಾರಣರಾದ ಪೋಷಕರು, ಕೋಚ್ ಮತ್ತು ಹಲವರ ಬಗ್ಗೆ ಕಥೆಯಲ್ಲಿ ಹೇಳುವುದರಿಂದ ಚಿತ್ರ ಮಾಡಲು ಒಪ್ಪಿಗೆ ನೀಡಿದೆ. ತಮ್ಮ ಕುಟುಂಬದವರು ಚಹಾ ಬೆಳೆ ಬೆಳೆಯುವ ಕೆಲಸ ಮಾಡುತ್ತಿದ್ದರು. ತಮಿಳರ ವಿರುದ್ಧ ನಡೆದ ನಾಗರಿಕ ಯುದ್ಧ ಮೂರು ದಶಕಗಳಿಗೂ ಹೆಚ್ಚು ಕಾಲ ಮುಂದುವರಿಯಿತು, ಇದರಿಂದ ತಮಿಳರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ ಎಂದು ಹೇಳಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]