Sunday, October 18 , 2020
ಮುತ್ತಿನ ನಗರಿಗೆ ಮತ್ತೇ ವರುಣಾಘಾತ: ಭಾರೀ ಮಳೆಗೆ ರಸ್ತೆ ತುಂಬೆಲ್ಲಾ ಬೋರ್ಗರೆದು ಹರಿದ ನೀರು

ಹೈದರಾಬಾದ್ (18.10.2020) ​: ಕಳೆದ ಮೂರು ದಿನಗಳ ಹಿಂದಷ್ಟೇ ಭಾರೀ ಮಳೆಯಾಗಿ ಮುತ್ತಿನ ನಗರದ ಜನರನ್ನು ಬೆಚ್ಚಿಬೀಳಿಸಿದ್ದ ವರುಣ ಮತ್ತೇ ಶಾಕ್​ ನೀಡಿದ್ದಾನೆ.

ಹೌದು, ಮುತ್ತಿನ ನಗರಿಯ ಕೆಲವು ಏರಿಯಾಗಳಲ್ಲಿ ಮತ್ತೆ 150 ಮಿ. ಮೀಟರ್​ಗೂ ಅಧಿಕ ಮಳೆಯಾಗಿದೆ. ಮಂಗಳವಾರವಷ್ಟೇ ಬರೋಬ್ಬರಿ 190 ಮಿ. ಮೀ ಮಳೆಯಾಗಿತ್ತು. ನಿನ್ನೆ ಮತ್ತೇ ಭಾರೀ ಮಳೆಯಾಗಿದೆ.

ಗ್ರೇಟರ್​ ಹೈದರಾಬಾದ್​ ಮುನ್ಸಿಪಲ್​ ಕಾರ್ಪೋರೇಷನ್​ (ಜಿಎಚ್​ಎಂಸಿ) ನ ವಿಪತ್ತು ಪ್ರತಿಕ್ರಿಯೆ ಪಡೆ (ಡಿಆರ್​ಎಫ್​)ನಗರದಲ್ಲಿ ತುಂಬಿರುವ ಮಳೆ ನೀರನ್ನು ತೆರವುಗೊಳಿಸಲು ನಿರಂತರ ಶ್ರಮಿಸುತ್ತಿದೆ. ಸಾಧ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಜಿಎಚ್​ಎಂಸಿಯ ಜಾಗರೂಕತೆ ಮತ್ತು ವಿಪತ್ತು ನಿರ್ವಹಣೆಯ ನಿರ್ದೇಶಕರಾದ ವಿಶ್ವಜಿತ್​ ಕಂಪತಿ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.



ಇಂದೂ ಕೂಡ ಹೈದರಾಬಾದಿನ ಕೆಲವು ಏರಿಯಾಗಳಲ್ಲಿ ಗುಡುಗು-ಮಿಂಚು ಸಹಿತ ಸಾಧಾರಣ ಮಳೆಯಾಗಲಿದ್ದು, ಒಂದು ಅಥವಾ ಎರಡು ಪ್ರದೇಶಗಳಲ್ಲಿ ತೀವ್ರ ಮಳೆಯಾಗಲಿದೆ ಎಂದು ಹೈದರಾಬಾದ್​ ಹವಮಾನ ಇಲಾಖೆ ಎಚ್ಚರಿಸಿದೆ. ಇನ್ನು ಭಾರಿ ಮಳೆಗೆ ಫಲಕ್​ನಾಮಾದ ರೈಲ್ವೆ ಸೇತುವೆ ಮೇಲೆ ದೊಡ್ಡ ರಂಧ್ರವೊಂದು ಕಾಣಿಸಿಕೊಂಡಿದ್ದು, ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

ಗುರುವಾರವಷ್ಟೇ ಮಾಹಿತಿ ನೀಡಿದ್ದ ತೆಲಂಗಾಣ ಸರ್ಕಾರ, ಭಾರಿ ಮಳೆಯಿಂದ ಉಂಟಾದ ಪ್ರವಾಹ ಮತ್ತು ಹಾನಿಯಿಂದ ಸುಮಾರು 50 ಮಂದಿ ಜೀವ ಕಳೆದುಕೊಂಡಿದ್ದಾರೆಂದು ತಿಳಿಸಿದೆ. ಸುಮಾರು 6000 ಕೋಟಿ ರೂ. ನಷ್ಟವಾಗಿದೆ ಎಂದು ಸರ್ಕಾರ ಅಂದಾಜಿಸಿದೆ.

 

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]