
ಹೈದರಾಬಾದ್ (4-12-2020): ಹೈದರಾಬಾದ್ ನಗರ ಪಾಲಿಕೆಗಳಿಗೆ ಡಿಸೆಂಬರ್ 1ರಂದು ನಡೆದ ಮತದಾನದ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
132 ವಾರ್ಡ್ಗಳಿಗೆ ನಡೆದ ಮತದಾನದಲ್ಲಿ ಶೇ 46.55ರಷ್ಟು ವೋಟಿಂಗ್ ನಡೆದಿತ್ತು. ಒಟ್ಟು 74.67 ಲಕ್ಷ ಮತದಾರ ಪೈಕಿ 34.50 ಲಕ್ಷ ಜನರು ಮತ ಚಲಾಯಿಸಿದ್ದರು. 8 ಸಾವಿರಕ್ಕೂ ಹೆಚ್ಚು ಸಿಬ್ಬಂದಿಯೊಂದಿಗೆ 30 ಕಡೆ ಮತ ಎಣಿಕೆ ಕಾರ್ಯ ನಡೆಯುತ್ತಿದೆ.
ಇದುವರೆಗಿನ ಮತ ಎಣಿಕೆಯಲ್ಲಿ ಬಿಜೆಪಿಯು 80 ವಾರ್ಡ್ಗಳಲ್ಲಿ ಮುನ್ನಡೆ ಕಾಯ್ದುಕೊಂಡರೇ ಟಿಆರ್ಎಸ್ 32 ಹಾಗೂ ಎಐಎಂಐಎಂ 15 ವಾರ್ಡ್ಗಳಲ್ಲಿ ಕಾಯ್ದುಕೊಂಡಿದೆ.