
ಬೆಂಗಳೂರು (19/02/2021) : ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿ ಫೆಬ್ರುವರಿ 18ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಪ್ರಮುಖ ಆಟಗಾರರನ್ನು ಖರೀದಿಸಿರುವ ರಾಯಲ್ ಚಾಲೆಂಜರ್ಸ್ ಹೆಚ್ಚು ಬಲಿಷ್ಠವೆನಿಸಿದೆ.
ಐಪಿಎಲ್ ಮಿನಿ ಹರಾಜಿನಲ್ಲಿ ಆರ್ಸಿಬಿ ತಂಡವು ಅತಿ ಹೆಚ್ಚು ₹15 ಕೋಟಿ ನೀಡಿ ನ್ಯೂಜಿಲೆಂಡ್ನ ಕೈಲ್ ಜೆಮಿಸನ್ ಅವರನ್ನು ಖರೀದಿಸಿದೆ. ಹಾಗೆಯೇ ₹14.25 ಕೋಟಿಗೆ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.
ಆರ್ಸಿಬಿ ಖರೀದಿಸಿದ ಆಟಗಾರರ ಪಟ್ಟಿ ಇಂತಿದೆ:
ಕೈಲ್ ಜೆಮಿಸನ್ (ಆಲ್ರೌಂಡರ್): ₹15 ಕೋಟಿ
ಗ್ಲೆನ್ ಮ್ಯಾಕ್ಸ್ವೆಲ್ (ಆಲ್ರೌಂಡರ್): ₹14.25 ಕೋಟಿ
ಡ್ಯಾನಿಯಲ್ ಕ್ರಿಸ್ಟಿಯನ್ (ಆಲ್ರೌಂಡರ್): ₹4.80 ಕೋಟಿ
ಸಚಿನ್ ಬೇಬಿ (ಬ್ಯಾಟ್ಸ್ಮನ್): ₹20 ಲಕ್ಷ
ರಜತ್ ಪಾಟೀದಾರ್ (ಬ್ಯಾಟ್ಸ್ಮನ್) : ₹20 ಲಕ್ಷ
ಮೊಹಮ್ಮದ್ ಅಜರುದ್ದೀನ್ (ವಿಕೆಟ್ ಕೀಪರ್): ₹20 ಲಕ್ಷ
ಸುಯಶ್ ಪ್ರಭುದೇಸಾಯಿ(ಆಲ್ರೌಂಡರ್): ₹20 ಲಕ್ಷ
ಕೆಎಸ್ ಭರತ್ (ವಿಕೆಟ್ ಕೀಪರ್): ₹20 ಲಕ್ಷ
ತಂಡದ ಪಟ್ಟಿ
ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ಯಜುವೇಂದ್ರ ಚಹಲ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ಆಯಡಂ ಜಾಂಪಾ, ಜೋಶ್ ಪಿಲಿಪ್, ಶಹಬಾಜ್ ಅಹ್ಮದ್, ಪವನ್ ದೇಶಪಾಂಡೆ, ಕೈಲ್ ಜೆಮಿಸನ್, ಗ್ಲೆನ್ ಮ್ಯಾಕ್ಸ್ವೆಲ್, ಡ್ಯಾನಿಯಲ್ ಕ್ರಿಸ್ಟಿಯನ್, ಸಚಿನ್ ಬೇಬಿ, ರಜತ್ ಪಾಟೀದಾರ್, ಮೊಹಮ್ಮದ್ ಅಜರುದ್ದೀನ್, ಸುಯಶ್ ಪ್ರಭುದೇಸಾಯಿ ಮತ್ತು ಕೆಎಸ್ ಭರತ್.