Monday, July 26 , 2021
ಸಂಚಾರಿ ವಿಜಯ್ ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅವಮಾನ! ನೆಟ್ಟಿಗರ ತರಾಟೆ

ರಾಷ್ಟ್ರಧ್ವನಿ ಸಿನಿಡೆಸ್ಕ್: ಇತ್ತೀಚೆಗೆ ನಿಧನರಾದ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ನಟ ಸಂಚಾರಿ ವಿಜಯ್ ಅವರಿಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರ ಇಡದೆ ಅವಮಾನ ಮಾಡಲಾಗಿದೆ ಎಂದು ನಿರ್ದೇಶಕ ಲಿಂಗದೇವರು ಅಸಮಧಾನ ಹೊರಹಾಕಿದ್ದರು.

ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ತೀವ್ರ ಅಸಮಧಾನ ವ್ಯಕ್ತಪಡಿಸಿ ವಾಣಿಜ್ಯ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಳೆದ ಹಲವು ದಿನಗಳಲ್ಲಿ ನಿಧನರಾದ ಕನ್ನಡ ಚಿತ್ರರಂಗದ ಕಲಾವಿದರು, ನಿರ್ಮಾಪಕರು, ನಟರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಚಿತ್ರ ನಿರ್ಮಾಪಕ ರಾಮು, ಕೆ.ಸಿ.ಎನ್‌.ಚಂದ್ರಶೇಖರ್‌ ಮತ್ತು ಅಣ್ಣಯ್ಯ ಚಂದ್ರಶೇಖರ್‌ ಅವರ ಫೋಟೋಗಳನ್ನು ಇಟ್ಟು ಗೌರವ ಸಲ್ಲಿಸಲಾಗಿತ್ತು. ಆದರೆ ಸಂಚಾರಿ ವಿಜಯ್ ಅವರ ಫೋಟೋ ಅಲ್ಲಿ ಕಾಣಲಿಲ್ಲ. ಕನ್ನಡ ಚಿತ್ರವೊಂದರ ಅಮೋಘ ಅಭಿನಯದ  ಮೂಲಕ ರಾಷ್ಟ್ರಪ್ರಶಸ್ತಿ ತಂದುಕೊಟ್ಟು ಚಿತ್ರರಂಗದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ ಪ್ರತಿಭಾವಂತ ನಟ ಸಂಚಾರಿ ವಿಜಯ್ ಅಕಾಲಿಕ ನಿಧನ ಹೊಂದಿದ್ದಾರೆ. ಅವರನ್ನು ಸಹ ಶ್ರದ್ಧಾಂಜಲಿ ಸಭೆಯಲ್ಲಿ ಫೋಟೋ ಇಟ್ಟು ಸ್ಮರಿಸಬೇಕು ಎಂಬ ಸಣ್ಣ ವಿಷಯ ವಾಣಿಜ್ಯ ಮಂಡಳಿಗೆ ತಿಳಿದಿಲ್ಲವೆ ಎಂದು ಜನ‌ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಫೋಟೋ ಇಡಲು ಸಾಧ್ಯವಾಗಿಲ್ಲ ಆದರೆ ಅವರನ್ನು ಸ್ಮರಿಸಲಾಯಿತು ಎಂಬ ಹಾರಿಕೆಯ ಸಮರ್ಥನೆ ನೀಡಿ ಸುಮ್ಮನಾಗಿದ್ದಾರೆ.

ಘಟನೆಯನ್ನು ಖಂಡಿಸಿದ ವೀರಶೈವ ಲಿಂಗಾಯತ ಯುವ‌ವೇದಿಕೆ:
ಸಂಚಾರಿ ವಿಜಯ್ ಅವರ ಭಾವಚಿತ್ರ ಇಡದೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವಮಾನ ಮಾಡಿರುವ ವಾಣಿಜ್ಯ ಮಂಡಳಿ ವರ್ತನೆಯನ್ನು ವೀರಶೈವ ಲಿಂಗಾಯತ ಯುವ ವೇದಿಕೆ  ಖಂಡಿಸಿದೆ. ಸಾವಿನಲ್ಲೂ ಜಾತಿ‌ ಹುಡುಕಿದ ವಾಣಿಜ್ಯ ಮಂಡಳಿಯ ಬಗ್ಗೆ ವೀರಶೈವ ಲಿಂಗಾಯತ ಯುವ ವೇದಿಕೆ ದಿಕ್ಕಾರವಿರಲಿ ಎಂದಿದೆ. ಈ ಮೂಲಕ ವೀರಶೈವ ಲಿಂಗಾಯತ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಅಂದು ಆರೋಪಿಸಿದ್ದಾರೆ. ಇನ್ನು ಮುಂದೆಯಾದರೂ ತಪ್ಪನ್ನು ಸರಿಪಡಿಸಿಕೊಂಡು ಹೋಗಲಿ ಎಂದು ಸಂಘಟನೆ ಆಗ್ರಹಿಸಿದೆ.

ರಾಷ್ಟ್ರಪ್ರಶಸ್ತಿ ಬಂದಾಗಲೂ ವಿಜಯ್ ಗೆ ಸಿಕ್ಕಿರಲಿಲ್ಲ ಸೂಕ್ತ ಸನ್ಮಾನ, ಗೌರವ:                                                                           ಸಂಚಾರಿ ವಿಜಯ್ ಗೆ 2014 ರಲ್ಲಿ ‘ನಾನು ಅವನಲ್ಲ, ಅವಳು’‌ ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಬಂದಿತು. ಈ ಮೂಲಕ ಕನ್ನಡದ ಪ್ರತಿಭೆ ರಾಷ್ಟ್ರಪ್ರಶಸ್ತಿ ತಂದು ಚಲನಚಿತ್ರ ರಂಗದ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿದ್ದರು. ಆದರೆ ಅಂದಿನ ಸರ್ಕಾರವಾಗಲಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಾಗಲಿ ಸಂಚಾರಿ ವಿಜಯ್ ಸಾಧನೆಯನ್ನು ಸ್ಮರಿಸುವ, ಪ್ರೋತ್ಸಾಹಿಸುವ ಯಾವುದೇ ಕಾರ್ಯಕ್ರಮ ನಡೆಸಲಿಲ್ಲ. ಈ‌ ಮೂಲಕ ಪ್ರಶಸ್ತಿ ವಿಜೇತ ಕಲಾವಿದರನ್ನು ಸನ್ಮಾನಿಸುವ ಸಣ್ಣ ಕಾರ್ಯವನ್ನೂ ಚಿತ್ರರಂಗ ಮಾಡಿರಲಿಲ್ಲ. ಅಲ್ಲಲ್ಲಿ ಒಂದಷ್ಟು ಸ್ಟಾರ್ ನಟರು ಪ್ರಶಂಸೆ ವ್ಯಕ್ತಪಡಿಸಿದ್ದನ್ನು ಹೊರತುಪಡಿಸಿ ಬೇರಾವುದೇ ಸನ್ಮಾನ, ಗೌರವ ವಿಜಯ್ ಅವರಿಗೆ ದಕ್ಕಲಿಲ್ಲ.

ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ಧರಾಮಯ್ಯ ಅವರು ಕಛೇರಿಗೆ‌ ಕರೆಸಿ ಹಾರ ಹಾಕಿ, ಶಾಲು ಹೊದಿಸಿ ಬೆನ್ನುತಟ್ಟಿ ಕಳುಹಿಸಿದ್ದರು. ಇಷ್ಟರಲ್ಲೇ ಮುಗಿದಿತ್ತು ಗೌರವ. ಸಂಚಾರಿ ವಿಜಯ್ ಅಪ್ಪಟ ಗ್ರಾಮೀಣ ಪ್ರತಿಭೆ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಹಳ್ಳಿಯೊಂದರಿಂದ ಬಂದು, ರಂಗಭೂಮಿಯಲ್ಲಿ ತೊಡಗಿಸಿಕೊಂಡು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡು ಬೆಳೆದು ಬಂದ ಪ್ರತಿಭಾವಂತ ನಟ. ಆದರೆ ಇಂತಹ ದೊಡ್ಡ ನಟನಿಗೆ ಸಲ್ಲಬೇಕಾದ ಗೌರವ ಮಾತ್ರ ಸರಿಯಾಗಿ ಸಿಗಲಿಲ್ಲ ಎಂಬುದೇ ದೊಡ್ಡ ವಿಪರ್ಯಾಸ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]