Saturday, October 17 , 2020
ಪೇಟಿಎಂ ಬಳಕೆದಾರರಿಗೆ ಬಿಗ್ ಶಾಕ್: ಹಣ ವರ್ಗಾವಣೆ ಮೇಲೆ ಶೇ 2ರಷ್ಟು ಹೆಚ್ಚುವರಿ ಶುಲ್ಕ!
paytm

ನವದೆಹಲಿ (17-10-2020): ಪೇಟಿಎಂ ಬಳಕೆದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಕ್ರೆಡಿಟ್ ಕಾರ್ಡ್​​ನಿಂದ ಪೇಮೆಂಟ್ ವಾಲೆಟ್​​ಗೆ ಹಣ ವರ್ಗಾವಣೆ ಮಾಡಲು ಶೇ 2 ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲು ಮುಂದಾಗಿದೆ.



ಪೇಟಿಎಂ ವಾಲೆಟ್​​​ಗೆ ಕ್ರೆಡಿಟ್ ಕಾರ್ಡ್ ನಿಂದ ಹಣ ವರ್ಗಾವಣೆ ಮಾಡಿದರೆ ಶೇ. 2 ರಷ್ಟು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಶೇ. 2 ರಷ್ಟು ಶುಲ್ಕದಲ್ಲಿ ಜಿಎಸ್ ಟಿ ಸೇರಿರುತ್ತದೆ ಎಂದು ಪೇಟಿಎಂ ಕಂಪನಿ ತಿಳಿಸಿದೆ.

ಪೇಟಿಎಂ ಕಂಪನಿಯು ಪ್ರಸ್ತುತ ಕ್ರೆಡಿಟ್ ಕಾರ್ಡ್ ನಿಂದ ಪೇಟಿಎಂಗೆ ಹಣ ವರ್ಗಾವಣೆ ಮಾಡಿದರೆ ಶೇ. 1 ರಷ್ಟು ಕ್ಯಾಶ್ ಬ್ಯಾಕ್ ನೀಡುತ್ತದೆ. ವ್ಯಾಪಾರಿ ಸೈಟ್ ನಿಂದ ಪೇಟಿಎಂಗೆ ಹಣ ವರ್ಗಾವಣೆ ಮಾಡಿದರೆ ಯಾವುದೇ ಶುಲ್ಕಿವಿರುವುದಿಲ್ಲ ಎಂದು ಕಂಪನಿ ಮಾಹಿತಿ ನೀಡಿದೆ.

ಜನವರಿ ತಿಂಗಳಿನಿಂದ ಈ ನಿಯಮ ಜಾರಿಯಲ್ಲಿ ಇತ್ತು. ಆದರೆ ಒಂದು ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಣ ವರ್ಗಾವಣೆಗೆ ಮಾತ್ರ ಈ ನಿಯಮ ಅನ್ವಯ ಆಗುತ್ತಿತ್ತು. ಆದರೆ ಅಕ್ಟೋಬರ್​ 15ರಿಂದ ಹೊಸ ನಿಯಮ ಜಾರಿಗೆ ಬಂದಿದ್ದು, ಇದರ ಅನ್ವಯ ಹಣದ ಮೊತ್ತ ಎಷ್ಟೇ ಇದ್ದರೂ ಶೇ.2ರಷ್ಟು ಹೆಚ್ಚುವರಿ ಶುಲ್ಕವನ್ನು ಬಳಕೆದಾರರು ತೆರಲೇಬೇಕಾಗಿದೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]