
ಬೆಂಗಳೂರು (23.02.2021): ಬೌದ್ಧ ಮತ್ತು ಜೈನ ಧರ್ಮಗಳ ಹುಟ್ಟಿನ ಕುರಿತ ಪಾಠಗಳು ಪರೀಕ್ಷೆಗೆ ಅಗತ್ಯವಿಲ್ಲ ಎಂದು ಶಿಕ್ಷಣ ಇಲಾಖೆ ಹೇಳಿರುವುದು ತಪ್ಪು. ಇತಿಹಾಸ ನಡೆದು ಬಂದ ದಾರಿಯನ್ನು ಎಲ್ಲರೂ ತಿಳಿಯುವುದು ಅಗತ್ಯ. ಇತಿಹಾಸವನ್ನೇ ಮುಚ್ಚಿಡುವ ಕೆಲಸ ಮಾಡಬಾರದು ಎಂದು ವಿಮರ್ಶಕ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.
‘ಜಲಯುದ್ಧ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ‘ಅಧಿಕಾರದಲ್ಲಿರುವವರು ಜನರ ಅಭಿವೃದ್ಧಿಗಾಗಿ ಆಡಳಿತ ನಡೆಸಿದರೆ, ಅವರು ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. ಅಧಿಕಾರವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡರೆ ಅವರ ದುಷ್ಟತನ ತೋರುತ್ತದೆ ಎಂದರು.
ಇನ್ನು ಲೇಖಕ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ ಕನ್ನಡಿಗರು ಜಲವಿವಾದ ಹೋರಾಟ ಮಾಡಿಕೊಂಡೇ ಬಂದಿದ್ದಾರೆ. ಅಂದಿನ ತಪ್ಪು ನಿರ್ಧಾರಗಳಿಂದ ಆಗಿರುವ ಸಮಸ್ಯೆಗಳಿಗೆ ಪುಸ್ತಕದಲ್ಲಿ ಎಚ್ಚರಿಕೆಯ ಸಂದೇಶವೂ ನೀಡಿದ್ದೇನೆ ಎಂದು ಅವರು ತಿಳಿಸಿದರು.