
ವಾಶಿಂಗ್ಟನ್ (15.01.2021) : ಜಗತ್ತಿನ ಅತಿ ಪುರಾತನ ಗುಹಾ ಚಿತ್ರವೊಂದನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆಹಚ್ಚಿದ್ದಾರೆ.
ಕಾಡು ಹಂದಿಯ ನೈಜ ಗಾತ್ರದ ಈ ಚಿತ್ರವನ್ನು ಇಂಡೋನೇಶ್ಯದಲ್ಲಿ ಕನಿಷ್ಠ 45,500 ವರ್ಷಗಳ ಹಿಂದೆ ಬಿಡಿಸಲಾಗಿದೆ ಎನ್ನಲಾಗಿದೆ. ಆ ಕಾಲ ಘಟ್ಟದಲ್ಲಿ ಮಾನವರು ವಾಸಿಸಿರುವುದಕ್ಕೆ ಇದು ಪುರಾವೆಯಾಗಿದೆ.
ಇಂಡೋನೇಶ್ಯಾದ ಸುಲವೆಸಿ ದ್ವೀಪದಲ್ಲಿ 2017ರಲ್ಲಿ ಪಿಎಚ್ಡಿ ವಿದ್ಯಾರ್ಥಿ ಬಸ್ರಾನ್ ಬುರ್ಹಾನ್ ಎಂಬವರು ಈ ಚಿತ್ರವನ್ನು ಪತ್ತೆಹಚ್ಚಿದ್ದಾರೆ. ವಿದ್ಯಾರ್ಥಿಗಳ ತಂಡವೊಂದು ಸಂಶೋಧನೆ ನಡೆಸುತ್ತಿದ್ದಾಗ ದುರ್ಗಮ ಜಲ್ಲಿ ಕಲ್ಲು ಬೆಟ್ಟವೊಂದರಲ್ಲಿ ಈ ಗುಹಾಚಿತ್ರ ಪತ್ತೆಯಾಗಿದೆ.