
ಬೆಂಗಳೂರು (10.01.2021) : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ತೆರೆಮೇಲೆ ಬರಲು ದಿನಾಂಕ ನಿಗದಿ ಆಗಿದೆ.
ಮುಂಬರುವ ಮಾರ್ಚ್ 11 ರಂದು ಈ ಸಿನಿಮಾ ತೆರೆಕಾಣಲಿದೆ . ಈ ಕುರಿತು ತಮ್ಮ ಟ್ವೀಟರ್ ನಲ್ಲಿ ರಾಬರ್ಟ್ ಸಿನಿಮಾದ ಪೋಸ್ಟರ್ ಒಂದನ್ನು ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ನಟ ದರ್ಶನ್, ಮಹಾ ಶಿವರಾತ್ರಿಗೆ ಸಿನಿಮಾದ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ.
#Roberrt Coming To Theaters On Maha Shivarathri March11 2021 #RoberrtStormMarch11 @TharunSudhir @umap30071 pic.twitter.com/OTecKUlN4v
— Darshan Thoogudeepa (@dasadarshan) January 10, 2021
ಇನ್ನು ಪ್ರಮುಖವಾದ ಮಾಹಿತಿ ನೀಡಿರುವ ದರ್ಶನ್, ಈ ಸಿನಿಮಾ ಯಾವುದೇ ಓಟಿಟಿ ಪ್ಲಾಟ್ ಪಾರ್ಮ್ ಗಳಲ್ಲಿ ಬಿಡುಗಡೆಗೊಳ್ಳುತ್ತಿಲ್ಲ, ಬದಲಾಗಿ ಚಿತ್ರಮಂದಿರದಲ್ಲಿಯೇ ಬಿಡುಗಡೆಗೊಳಿಸಲು ಚಿತ್ರತಂಡ ನಿರ್ಧರಿಸಿದೆ ಎಂದಿದ್ದಾರೆ.