Friday, March 5 , 2021
ಜಗ್ಗೇಶ್ ಆಡಿಯೋ ಪ್ರಕರಣ, ತರಾಟೆಗೆ ತೆಗೆದುಕೊಂಡ ದರ್ಶನ್ ಅಭಿಮಾನಿಗಳು: ನವರಸನಾಯಕ ಹೇಳಿದ್ದೇನು?
jaggesh

ಬೆಂಗಳೂರು (23.02.2021): ದರ್ಶನ್ ಅಭಿಮಾನಿಗಳ ಕುರಿತು ಜಗ್ಗೇಶ್ ಮಾತನಾಡಿರುವ ಆಡಿಯೋ ದೊಡ್ಡ ವಿವಾದ ಸೃಷ್ಟಿ ಮಾಡಿತ್ತು. ಈಗ ಇದೇ ವಿಚಾರವಾಗಿ  ಜಗ್ಗೇಶ್‌ರನ್ನು ದರ್ಶನ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡು ಕ್ಷಮೆ ಕೇಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಕನ್ನಡ ಚಿತ್ರರಂಗದ ನಿರ್ಮಾಪಕರೊಬ್ಬರ ಜೊತೆ ಜಗ್ಗೇಶ್‌ ಅವರು ಫೋನ್‌ನಲ್ಲಿ ಮಾತನಾಡಿದ ಸಂಭಾಷಣೆಯ ಆಡಿಯೋ ಕ್ಲಿಪ್‌ ಲೀಕ್‌ ಆಗಿ, ರಾದ್ಧಾಂತ ಸೃಷ್ಟಿ ಮಾಡಿತ್ತು.

ಜಗ್ಗೇಶ್ ಅವರು ಸಿನಿಮಾವೊಂದರ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾಗ ಮುತ್ತಿಗೆ ಹಾಕಿಕೊಂಡ ಒಂದಷ್ಟು ಜನರು ಕ್ಷಮೆ ಕೇಳಲೇಬೇಕು ಎಂದು ಹಠ ಹಿಡಿದಿದ್ದಾರೆ. ಆಗ ಮಾತನಾಡಿದ ಜಗ್ಗೇಶ್ , ನನಗೂ ಇದಕ್ಕೂ ಸಂಬಂಧವೇ ಇಲ್ಲ. ಅದು ನನ್ನ ಧ್ವನಿ ಅಲ್ಲ. ನಾನು ಕ್ಷಮೆ ಕೇಳಲ್ಲ. ತಂದಿಡುವ ಸಲುವಾಗಿ ಈ ರೀತಿ ಮಾಡಲಾಗಿದೆ. ತಪ್ಪು ಸಂದೇಶ ಹೋಗಿದೆ. ಇದು ದೊಡ್ಡ ಬಹಳ ಹುನ್ನಾರ. ದರ್ಶನ್ ಅವರಿಗೆ ಮುಂಚಿನಿಂದಲೂ ನಾನು ಬೆಂಬಲ ನೀಡಿದ್ದೇನೆ. ನನ್ನ ಮತ್ತು ದರ್ಶನ್ ಬಾಂಧವ್ಯ ಹಾಳು ಮಾಡಲಾಗೋದಿಲ್ಲ. ನಾನು ಹಾಗೂ ದರ್ಶನ್ ಚೆನ್ನಾಗಿದ್ದೇವೆ ಎಂದು ಜಗ್ಗೇಶ್ ಹೇಳಿದರು. ಇದಕ್ಕೆ ಬಗ್ಗೆದ ಅಭಿಮಾನಿಗಳು ಕ್ಷಮೆ ಯಾಚಿಸುವ ವರೆಗೂ ಬಿಡಲಿಲ್ಲ.

ಬೇಸರ ವ್ಯಕ್ತಪಡಿಸಿದ ಜಗ್ಗೇಶ್:
ಈ ಸಂಬಂಧ ಟ್ವೀಟ್ ಮಾಡಿರುವ ನಟ ಜಗ್ಗೇಶ್, ಆತ್ಮೀಯರೆ ನನಗೆ ನೀವು ನಿಮಗೆ ನಾನು. ಇನ್ನುಮುಂದೆ ಉದ್ಯಮದ ಯಾರ ಹುಟ್ಟುಹಬ್ಬ,ಸಿನಿಮಾ, ಸ್ನೇಹ,ಕಾರ್ಯಕ್ರಮ,ಭೇಟಿ,ಹರಟೆ  ನನ್ನಿಂದ ಇರುವುದಿಲ್ಲ! ಮುಂದೆ ನನ್ನ ಸಿನಿಮ ನನ್ನ ztv show ಗೆ ಮೀಸಲು. ನನಗೆ ತಾಮಸವಾಗಿದೆ ನಮ್ಮರಂಗ,ದೊಡ್ಡವರು ಬದುಕಿದ್ದಾಗಲೆ ಅಪಮಾನಿಸಿ ದೊಡ್ಡವರಾಗುವ ಹುನ್ನಾರ ಎಂದಿದ್ದಾರೆ.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಸಂವಿಧಾನಾತ್ಮಕ ಸದನಗಳಲ್ಲಿ ಪಾಸ್ ಆಗುತ್ತಿದೆ ‘ಹಿಂದೂ..
ದ್ವೇಷಪೂರಿತ, ಅಸಂವಿಧಾನಿಕ ಪೌರತ್ವ ತಿದ್ದುಪಡಿ ಮಸೂದೆ ಉಭಯ ಸದನಗಳಲ್ಲಿ ಅಂಗೀಕಾರವಾಗಿದೆ. ಇನ್ನು ರಾಷ್ಟ್ರಪತಿ ಅಂಕಿತ...
POLL

[democracy id="1"]