Monday, July 26 , 2021
ದಲಿತ ಸಿಎಂ‌ ಚರ್ಚೆ| ನಾನು ದಲಿತರ ಧ್ವನಿ: ಶಾಸಕ ಎನ್ ಮಹೇಶ್

ಕೊಳ್ಳೇಗಾಲ (26-06-2021): ಮುಂದಿನ ಮುಖ್ಯಮಂತ್ರಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ‌ ಶಾಸಕ ಎನ್.ಮಹೇಶ್ ದಲಿತ‌ ಸಿಎಂ ಬಗ್ಗೆ ಪ್ರಸ್ತಾಪಿಸಿದ್ದರು. ಸಾಕಷ್ಟು ಅನುಭವ, ಅರ್ಹತೆ, ರಾಜಕೀಯ ಪ್ರಬುದ್ಧತೆ ಇದ್ದರೂ‌ ಸಹ  ಬಿ.ರಾಚಯ್ಯ, ಬಸವಲಿಂಗಪ್ಪ, ಕೆ.ಹೆಚ್. ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ ಪರಮೇಶ್ವರ್, ಕೆ.ಹೆಚ್. ಮುನಿಯಪ್ಪ ಮುಂತಾದವರನ್ನು ಮುಖ್ಯಮಂತ್ರಿ ಮಾಡದಿರುವುದು ದಲಿತ ಸಮುದಾಯಕ್ಕೆ ಮಾಡಿದ ಮೋಸ ಎಂದು ಶಾಸಕ ಎನ್ ಮಹೇಶ್ ಮಾಧ್ಯಮಗಳಿಗೆ ಎನ್.ಮಹೇಶ್  ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಖಾಸಗೀ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಶಾಸಕ ಮಹೇಶ್ “ನಾನು ದಲಿತರ ಧ್ವನಿ, ಆದ್ದರಿಂದಲೇ ದಲಿತರು ಮುಖ್ಯಮಂತ್ರಿಯಾಗಬೇಕು ಎಂದು ಆಗ್ರಹಿಸುತ್ತೇನೆ” ಎಂದರು.      ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಪಕ್ಷದ ಕೆಲವು ದಲಿತ ನಾಯಕರು, ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯ ಇದರ ಬಗ್ಗೆ ಮಾತನಾಡಲು ನೀವು ಯಾರು? ನಿಮಗೆ ತಾಕತ್ತು ಇದ್ದರೆ ಬಿಜೆಪಿಯಲ್ಲಿ ಇರುವ ದಲಿತರನ್ನು ಮುಖ್ಯಮಂತ್ರಿ ಮಾಡುವಂತೆ ಹೇಳಿ ಎಂದು ಸವಾಲ್ ಎಸೆದಿದ್ದರು. ದಲಿತರ ಪರವಾಗಿ ಸದನದ ಒಳಗೆ ಮತ್ತು ಹೊರಗೆ ಮಾತನಾಡಿದ್ದೇನೆ. ಮುಂದೆಯೂ ದಲಿತರ ಪರವಾಗಿ ಮಾತನಾಡುತ್ತಲೇ ಇರುತ್ತೇನೆ. ನಾನು ದಲಿತರ ಧ್ವನಿ, ದಲಿತರನ್ನು ಸಿಎಂ ಮಾಡಿ ಎಂದು ಹೇಳುವ ಹಕ್ಕು ನನಗಿದೆ, ಯಾಕೆಂದರೆ ನಾನು ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿರುವ ಶಾಸಕ ಎಂದು ಕಾಂಗ್ರೆಸ್ ನಾಯಕರ ಮಾತುಗಳಿಗೆ ತಿರುಗೇಟು‌ ನೀಡಿದರು.

ರಾಷ್ಟ್ರ ಹಾಗೂ  ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಸುದೀರ್ಘವಾಗಿ ಆಡಳಿತ ನಡೆಸಿದೆ. ಇದಕ್ಕೆ ಕಾರಣ ದಲಿತರು ಮತ್ತು ಮುಸ್ಲಿಮರು. ಈ ಎರಡು ವರ್ಗಗಳು ಕಾಂಗ್ರೆಸ್ ಪಕ್ಷದ ಶಾಶ್ವತವಾದ ಮತಬ್ಯಾಂಕ್ ಆಗಿದ್ದಾರೆ. ಹಾಗಾಗಿ ದಲಿತರಿಗೆ ಹಾಗೂ ಮುಸ್ಲಿಮರಿಗೆ ಕಾಂಗ್ರೇಸ್ ನಿರಂತರವಾಗಿ ವಂಚನೆ ಮಾಡುತ್ತಲೇ ಬರುತ್ತಿದೆ. ಅನೇಕ ಘಟಾನುಘಟಿ ದಲಿತ ನಾಯಕರಿಗೆ ಸಿಗಬೇಕಾದ ಅಧಿಕಾರ, ನ್ಯಾಯಯುತವಾದ ಸ್ಥಾನಮಾನ ಸಿಗಲಿಲ್ಲ. ಆದ್ದರಿಂದ ಒಬ್ಬ ದಲಿತ ಶಾಸಕನಾಗಿ ದಲಿತ ಮುಖ್ಯಮಂತ್ರಿಯ ಬಗ್ಗೆ ಮಾತನಾಡಿದ್ದೇನೆ.

ಈ ರಾಜ್ಯಕ್ಕೆ ದಲಿತ ಸಮುದಾಯದವರೊಬ್ಬರು ಮುಖ್ಯಮಂತ್ರಿಯಾಗಬೇಕೆನ್ನುವುದು ನನ್ನ ಬಯಕೆ. ಆದರೆ ಈ ವಿಷಯವನ್ನು ನಿರ್ಧರಿಸಬೇಕಾಗಿರುವುದು ನನ್ನ ಸಮುದಾಯದ ಜನರು ಎಂದು ಉತ್ತರಿಸಿದರು.

Like us on facebook
Disclaimer:

ರಾಷ್ಟ್ರಧ್ವನಿ ಅಂತಾರ್ಜಾಲ ಸುದ್ದಿ ವಾಹಿನಿಯಲ್ಲಿ ಪ್ರಕಟವಾಗುವ ಸುದ್ದಿಗಳ ಕುರಿತು ಸಾರ್ವಜನಿಕರು ಆರೋಗ್ಯಕರ ಚರ್ಚೆ, ಕಮೆಂಟ್ ಗಳನ್ನು ಮಾಡಬಹುದಾಗಿದೆ. ಧರ್ಮ, ಜಾತಿ ನಿಂದನೆಯಾಗುವಂತಹ ಮತ್ತು ಸಾಮರಸ್ಯ ಕೆಡಿಸುವಂತಹ ದುರುದ್ದೇಶಪೂರಿತ ಕಮೆಂಟ್ ಹಾಗೂ ಚರ್ಚೆ ಕಾನೂನು ರೀತಿಯಲ್ಲಿ ಅಪರಾಧವಾಗಿರುತ್ತದೆ. ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಯಾವುದೇ ಕಮೆಂಟ್ ಗಳನ್ನು ಹಾಕಿದ್ದಲ್ಲಿ, ಅದಕ್ಕೆ ಕಮೆಂಟ್ ಹಾಕುವವರೇ ಹೊಣೆಗಾರರಾಗಿರುತ್ತಾರೆ. ಅಂತಹವರ ಹೆಸರು ಮತ್ತು ಐಪಿ ಅಡ್ರೆಸ್ ಗಳನ್ನು ಸಂಬಂಧಪಟ್ಟ ಇಲಾಖೆಗೆ ಒದಗಿಸಲು ರಾಷ್ಟ್ರಧ್ವನಿ ಬದ್ಧವಾಗಿರುತ್ತದೆ.

ಸಿನಿಮಾ
ಸಂಪಾದಕೀಯ ಮತ್ತಷ್ಟು
ಇನ್ನು ನೆನಪುಗಳಲ್ಲಿ ಮಾತ್ರ ನಿತ್ಯ ಸಂಚಾರಿ.‌‌.‌‌,..
ರಾಷ್ಟ್ರಧ್ವನಿ ಆರಂಭಗೊಂಡು 2019 ರ ಜನವರಿಗೆ ಸರಿಯಾಗಿ ಒಂದು ವರ್ಷ ‌ಆಗಿತ್ತು. ಹೊಸವರ್ಷದ ಸಂಭ್ರಮದಿಂದ...
POLL

[democracy id="1"]